ದಾವಣಗೆರೆ: ಜಿಲ್ಲೆಯಲ್ಲಿ ಗಣೇಶ್ ಹಬ್ಬಕ್ಕೂ ಮುನ್ನವೇ ಸಾವರ್ಕರ್ ಹಾಗೂ ಬಾಲಗಂಗಾಧರ್ ತಿಲಕ್ ಇರುವ ಫೋಟೋಗಳು ಫ್ಲೆಕ್ಸ್ಗಳಲ್ಲಿ ರಾರಾಜಿಸುತ್ತಿವೆ. ನಗರದ ಹಿಂದೂ ಮಹಾಸಭಾ ಗೌರಿ ಗಣೇಶ್ ಸೇವಾ ಸಮಿತಿಯಿಂದ ಹೊನ್ನಾಳಿ ಪಟ್ಟಣದ ತುಂಬ ಇವುಗಳನ್ನು ಅಳವಡಿಸಲಾಗಿದೆ.
ಪ್ರತಿಯೊಂದು ಫ್ಲೆಕ್ಸ್ನಲ್ಲಿ ಸಾವರ್ಕರ್, ಬಾಲಗಂಗಾಧರ್ ತಿಲಕ್ ಫೋಟೋ ಕಾಣುತ್ತಿದೆ. ಬ್ಯಾನರ್ನಲ್ಲಿ ಸಾವರ್ಕರ್ ಫೋಟೋ ಹಾಕಿದ್ದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರೂ ಕೂಡ ಫ್ಲೆಕ್ಸ್ ಹಾಕಲಾಗಿದೆ. ಯಾರು ಏನೇ ವಿರೋಧ ಮಾಡಿದರೂ ನಾವು ಅದ್ಧೂರಿ ಗಣೇಶೋತ್ಸವ ಮಾಡೇ ಮಾಡ್ತೀವಿ ಎಂದು ಪಟ್ಟು ಹಿಡಿದಿರುವ ಇಲ್ಲಿನ ಗಣೇಶ ಸಮಿತಿಯವರು, ಪಟ್ಟಣದ ಪ್ರಮುಖ ವೃತ್ತಗಳಲ್ಲಿ 10 ಬ್ಯಾನರ್ ಆಳವಡಿಸಿದ್ದಾರೆ. ಇನ್ನೂ 40 ಬ್ಯಾನರ್ಗಳನ್ನು ಹೊನ್ನಾಳಿ ಪಟ್ಟಣದಾದ್ಯಂತ ಅಳವಡಿಕೆ ಮಾಡಲು ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಏರಿಯಾಗಳಲ್ಲಿ, ನಗರ ಪ್ರದೇಶಗಳಲ್ಲಿ ಸಾವರ್ಕರ್ ಫ್ಲೆಕ್ಸ್ ಅಳವಡಿಸುತ್ತೇವೆ.. ಕಾಂಗ್ರೆಸ್ ನಾಯಕರಿಗೆ ರೇಣುಕಾಚಾರ್ಯ ಸವಾಲು