ದಾವಣಗೆರೆ: ಚಿತ್ರದುರ್ಗದ ಮುರುಘಾಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನು ಗುರುವಾರ ರಾತ್ರಿ ದಾವಣಗೆರೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುರುಘಾಶ್ರೀ ವಿರುದ್ಧ ಪಿತೂರಿ ಪ್ರಕರಣ ಸಂಬಂಧ ಚಿತ್ರದುರ್ಗದ ಗ್ರಾಮಾಂತರ ಠಾಣೆ ಪೊಲೀಸರು ಸೌಭಾಗ್ಯರನ್ನು ದಾವಣಗೆರೆಯಿಂದ ಖಾಸಗಿ ಕಾರಿನಲ್ಲಿ ಚಿತ್ರದುರ್ಗಕ್ಕೆ ಕರೆದೊಯ್ದಿದ್ದಾರೆ.
ಸೌಭಾಗ್ಯ, ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಪತ್ನಿ ಹಾಗು ಮಾಜಿ ಜಿ.ಪಂ ಅಧ್ಯಕ್ಷೆಯಾಗಿದ್ದಾರೆ. ಗುರುವಾರ ರಾತ್ರಿ ಸೌಭಾಗ್ಯರ ವಶಕ್ಕೆ ಪಡೆದು ದಾವಣಗೆರೆಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಇಂದು ಬೆಳಗ್ಗೆ ಚಿತ್ರದುರ್ಗಕ್ಕೆ ಕರೆದೊಯ್ಯಲಾಗಿದೆ.
ಬಸವರಾಜನ್ ಹಾಗೂ ಸೌಭಾಗ್ಯ ಬಸವರಾಜನ್ ದಂಪತಿ ವಿರುದ್ಧ ನವೆಂಬರ್ 9ರಂದು ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ ಸಂಬಂಧ ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮುರುಘಾಮಠದ ಉಸ್ತುವಾರಿ ಪೀಠಾಧಿಪತಿ ಬಸವಪ್ರಭು ಶ್ರೀಗಳು ದೂರು ನೀಡಿದ್ದರು.
ನ. 10ರಂದು ಬಸವರಾಜನ್ ಬಂಧನ: ಪ್ರಕರಣ ಸಂಬಂಧ ಈಗಾಗಲೇ ನ.10ರಂದು ಪೊಲೀಸರು ಮಠದ ಶಿಕ್ಷಕ ಬಸವರಾಜೇಂದ್ರ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಳಿಕ ನ. 10ರ ರಾತ್ರಿ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಬಸವರಾಜನ್ ಬಂಧನವಾಗಿದೆ.
ಇದನ್ನೂ ಓದಿ: ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ