ದಾವಣಗೆರೆ: ಎಂಎಲ್ಎ ಹೆಸರು ಹೇಳಿಕೊಂಡು ಬೆದರಿಕೆ ಹಾಕಲು ಬಂದವನಿಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದಲ್ಲಿ ನಡೆದಿದೆ.
ಪರವಾನಗಿ ಪಡೆದು ತುಂಗಭದ್ರ ನದಿಯಲ್ಲಿ ಮರಳು ಸಾಗಾಟ ಮಾಡುತ್ತಿದ್ದ ಜನರಿಗೆ ಶ್ರೀಕಾಂತ ಎಂಬಾತ ಹರಿಹರ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಮರಳು ಸಾಗಾಟ ನಿಲ್ಲಿಸಲು ಹೇಳಿದ್ದಾರೆ ಎಂದು ಬೆದರಿಕೆ ಹಾಕುತ್ತಿದ್ದನಂತೆ. ಇದರಿಂದ ಕೋಪಗೊಂಡ ಸ್ಥಳೀಯರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಸಕ ರಾಮಪ್ಪ ಅವರು ಹೇಳಿದ್ದಾರೆ ಮರಳು ಸಾಗಾಟ ನಿಲ್ಲಿಸಿ ಅಂತ ಅವಾಜ್ ಹಾಕಿದ್ದ ಶ್ರೀಕಾಂತ್ನ ವಿರುದ್ಧ ಗ್ರಾಮಸ್ಥರು ಹಫ್ತಾ ವಸೂಲಿ ಮಾಡಲು ಬಂದಿದ್ದೀಯ ಎಂದು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.