ದಾವಣಗೆರೆ: ಎರಡು ತಲೆ ಹಾವು ಮಾರಾಟಕ್ಕೆ ಯತ್ನಿಸುತ್ತಿದ್ದ ಐದು ಜನರನ್ನು ಪೊಲೀಸರು ಬಂಧಿಸಿ, ಮೂರು ಹಾವುಗಳನ್ನು ವಶಕ್ಕೆ ಪಡೆದಿದ್ದಾರೆ.
ಮಣ್ಣುಮುಕ್ಕ ಹಾವುಗಳನ್ನು ಚೀಲದಲ್ಲಿ ಹಾಕಿಕೊಂಡು ದಾವಣಗೆರೆ ನಗರದ ಪಿ.ಜೆ. ಬಡಾವಣೆಯಲ್ಲಿರುವ ವಿಶ್ವೇಶ್ವರಯ್ಯ ಪಾರ್ಕಿನಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿ, ಐದು ಜನರನ್ನು ಬಂಧಿಸಿ ಹಾವುಗಳನ್ನು ವಶಕ್ಕೆ ಪಡೆದಿದ್ದಾರೆ.
ಓದಿ:ಕಾಂಗ್ರೆಸ್ನ ಈ ಹೀನಾಯ ಸ್ಥಿತಿಗೆ ಮೂರು ಶಾಪ ಕಾರಣ: ಕಟೀಲ್
ಬಂಧಿತರನ್ನು ಗಣೇಶ್ (28), ಅಭಿಲಾಷ್ (21), ನಾಗರಾಜ (34) ಮುತ್ತಪ್ಪ (27), ಪ್ರಜ್ವಲ್ ಎಂದು ಗುರುತಿಸಲಾಗಿದೆ. ಬಂಧಿತರು ಚಿತ್ರದುರ್ಗ, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳ ಮೂಲದವರೆಂದು ತಿಳಿದು ಬಂದಿದೆ.