ETV Bharat / state

ಮೈಸೂರು ಕಿರ್ಲೋಸ್ಕರ್ ಎಂಪ್ಲಾಯೀಸ್​​ ಕೋ-ಆಪರೇಟಿವ್ ಸೊಸೈಟಿ ಚುನಾವಣೆ: ಬಿರಾದಾರ ತಂಡಕ್ಕೆ ಜಯ - s r biradara team

ಕಿರ್ಲೋಸ್ಕರ್ ಎಂಪ್ಲಾಯೀಸ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಸ್.ಆರ್.ಬಿರಾದಾರ ತಂಡ ಎಲ್ಲಾ ನಿರ್ದೇಶಕ ಸ್ಥಾನಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

election
election
author img

By

Published : Feb 25, 2020, 5:26 PM IST

ಹರಿಹರ: ನಗರದ ಪ್ರತಿಷ್ಠಿತ ಮೈಸೂರು ಕಿರ್ಲೋಸ್ಕರ್ ಎಂಪ್ಲಾಯೀಸ್ ಕೋ-ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ನಿರ್ದೇಶಕ ಸ್ಥಾನಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಮೂಲಕ ಎಸ್.ಆರ್.ಬಿರಾದಾರ ತಂಡ ಕ್ಲೀನ್ ಸ್ವೀಪ್ ಮಾಡಿದೆ.

ಒಟ್ಟು 13 ಸ್ಥಾನಗಳಲ್ಲಿ ಮಹಿಳಾ ಮೀಸಲು ಎರಡು ಸ್ಥಾನಗಳಿಗೆ ಬಿರಾದಾರ ಗುಂಪಿನ ವಿಜಯಲಕ್ಷ್ಮಿ, ಕೆ.ಜೆ.ಕುಸುಮಾ ಅವಿರೋಧವಾಗಿ ಆಯ್ಕೆಯಾಗಿದ್ದರೆ, 1 ಸ್ಥಾನಕ್ಕೆ ತಾಂತ್ರಿಕ ಕಾರಣದಿಂದ ಚುನಾವಣೆ ನಡೆಸಲಾಗಿಲ್ಲ. ಮತದಾನ ನಡೆದ ಎಲ್ಲಾ 10 ಸ್ಥಾನಗಳಲ್ಲೂ ಬಿರಾದಾರ ಗುಂಪಿನ ಅಭ್ಯರ್ಥಿಗಳು ಭಾರೀ ಅಂತರದ ಗೆಲುವು ಸಾಧಿಸಿದ್ದಾರೆ.

ಸಾಮಾನ್ಯ ವರ್ಗಕ್ಕೆ ಸ್ಪರ್ಧಿಸಿದ್ದ ಎಸ್.ಆರ್.ಬಿರಾದಾರ 374 ಮತ ಗಳಿಸಿದರೆ, ಹಿಂದುಳಿದ ವರ್ಗ ಎ ಸ್ಥಾನಕ್ಕೆ ಸ್ಪರ್ಧಿಸಿದ್ದ ಆರ್.ಎಸ್.ಮುಡಿ 220 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಬಿ.ಹೆಚ್.ಭರಮಪ್ಪ ಎದುರು 120 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

ಉಳಿದಂತೆ ಸಾಮಾನ್ಯ ವರ್ಗಕ್ಕೆ ಪಾಟೀಲ್ ವಿ.ವಿ. (339 ಮತಗಳಿಂದ), ತಿಪ್ಪೇಸ್ವಾಮಿ ಸಿ.ಎಂ. (325), ಶ್ರೀನಾಥ ಹೆಚ್.ಎಸ್. (321), ಲಕ್ಷ್ಮಪ್ಪ (300), ಹಾಲಪ್ಪ ಜಿ. (287), ಬಸವರಾಜ (286), ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ರೇವಣ ಸಿದ್ದಪ್ಪ ಬಿ. (331), ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ಶಿವಲಿಂಗಪ್ಪ ಎಂ.ಎನ್. (313) ಆಯ್ಕೆಯಾಗಿದ್ದಾರೆ.

ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಮಾತನಾಡಿದ ಎಸ್.ಆರ್.ಬಿರಾದಾರ, ತಮ್ಮ ಅವಧಿಯ 2010ರಿಂದ 2019ರವರಗೆ ಹಂತ ಹಂತವಾಗಿ ಸದಸ್ಯರು ಪಡೆಯುವ ಲಾಭಾಂಶ ಶೇ. 5ರಿಂದ 16ಕ್ಕೆ ಏರಿಕೆಯಾಗಿದೆ. ಸದಸ್ಯರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಸಂಘದ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನ ನಡೆಸಲಾಗುವುದು. ಸತತ 4ನೇ ಅವಧಿಗೆ ಸದಸ್ಯರು ವಿಶ್ವಾಸ ಇಟ್ಟು ನಮ್ಮ ಗುಂಪನ್ನು ಆಯ್ಕೆ ಮಾಡಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.