ETV Bharat / state

ದಾವಣಗೆರೆ: ದ್ವಿಚಕ್ರ ವಾಹನಕ್ಕೆ ಆಟೋ ಡಿಕ್ಕಿ.. ಮೂವರ ಸ್ಥಿತಿ ಗಂಭೀರ - ಆಟೋ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ

ಆಟೋ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ - ಜಗಳೂರು ತಾಲೂಕಿನ ಭರಮಸಮುದ್ರ ಕ್ರಾಸ್ ಬಳಿ ನಡೆದ ಘಟನೆ - ಅಪಘಾತದಲ್ಲಿ ನಾಲ್ವರ ಪೈಕಿ ಮೂವರ ಸ್ಥಿತಿ ಗಂಭೀರ

road accident
ರಸ್ತೆ ಅಪಘಾತ
author img

By

Published : Dec 29, 2022, 10:39 AM IST

Updated : Dec 29, 2022, 12:28 PM IST

ಭರಮಸಮುದ್ರ ಕ್ರಾಸ್ ಬಳಿ ದ್ವಿಚಕ್ರ ವಾಹನಕ್ಕೆ ಆಟೋ ಡಿಕ್ಕಿ

ದಾವಣಗೆರೆ: ಆಟೋ ಮತ್ತು ದ್ವಿಚಕ್ರ ವಾಹನದ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರ ಪೈಕಿ ಮೂವರ ಸ್ಥಿತಿ ಗಂಭೀರವಾದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಭರಮಸಮುದ್ರ ಗ್ರಾಮದ ಕ್ರಾಸ್ ಬಳಿ ಬುಧವಾರ ತಡರಾತ್ರಿ ಸಂಭವಿಸಿದೆ.

ಜಗಳೂರಿನಿಂದ ಭರಮಸಮುದ್ರ ಮಾರ್ಗವಾಗಿ ಕಲ್ಲೇದೇವರಪುರಕ್ಕೆ ಅಪ್ಪೆ ಆಟೋ ತೆರಳುತ್ತಿದ್ದಾಗ ಭರಮಸಮುದ್ರ ಕ್ರಾಸ್​ ಬಳಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್​ನಲ್ಲಿದ್ದ ಇಬ್ಬರು ಹಾಗೂ ಆಟೋದಲ್ಲಿದ್ದ ಓರ್ವನ ಸ್ಥಿತಿ ಗಂಭೀರವಾಗಿದ್ದು, ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ಸಾಗಿಸಲಾಯಿತು.

ಇದನ್ನೂ ಓದಿ: ರಸ್ತೆ ದಾಟುತ್ತಿದ್ದ ಪಾದಚಾರಿಗೆ ಕಾರು ಡಿಕ್ಕಿ, ಸ್ಥಳದಲ್ಲೇ ಸಾವು: ಸಿಸಿಟಿವಿ ದೃಶ್ಯ

ಗಂಭೀರವಾಗಿ ಗಾಯಗೊಂಡವರನ್ನು ಚಿತ್ರದುರ್ಗ ತಾಲೂಕಿನ ಹುಲ್ಕೇಹಾಳ್ ಗ್ರಾಮದ ಭರತ್ (25), ಮುದ್ದಾಪುರ ಗ್ರಾಮದ ಮಧು (26), ಕಲ್ಲೇದೇವರಪುರದ ಕಲ್ಲೇಶ್(32) ಎಂದು ತಿಳಿದುಬಂದಿದೆ. ಅಟೋದಲ್ಲಿದ್ದ ಮತ್ತೊಬ್ಬ ಕೂಡ್ಲಿಗಿ ತಾಲೂಕಿನ ಲೋಕಿಕೆರೆ ಗ್ರಾಮದ ಕೊಲ್ಲಪ್ಪ (43) ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಜೆಸಿಬಿಗೆ ಬೈಕ್ ಡಿಕ್ಕಿ, ಸವಾರ ಸಾವು: ಸಿಸಿಟಿವಿಯಲ್ಲಿ ದೃಶ್ಯ ಸೆರೆ

Last Updated : Dec 29, 2022, 12:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.