ದಾವಣಗೆರೆ: ಕೇಸರಿ ಶಾಲು ಹಾಗೂ ಹಿಜಾಬ್ ಹಿನ್ನೆಲೆಯಲ್ಲಿ ನಡೆದಿರುವ ಗಲಾಟೆಗೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆಯಲ್ಲಿ 20 ಪ್ರಕರಣ ದಾಖಲಾಗಿದ್ದು, 30 ಜನರನ್ನು ಬಂಧಿಸಲಾಗಿದೆ. ಅವಹೇಳನಕಾರಿ ಪೋಸ್ಟ್, ಹಲ್ಲೆ, ಗಲಭೆ ಸಂಬಂಧ ಈ ಪ್ರಕರಣಗಳು ದಾಖಲಾಗಿದೆ.
ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರ ಕಟ್ಟೆಚ್ಚರ ವಹಿಸಿದ್ದಾರೆ. ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಂದ ಯಾವ ಸಂಘಟನೆಗಳೂ ಜಿಲ್ಲೆಗೆ ಬಂದಿಲ್ಲ. ಒಂದು ವೇಳೆ ಬಂದರೆ ಅಂಥವರ ಮೇಲೆ ಕಣ್ಣಿಡುವಂತೆ ಪೊಲೀಸರಿಗೆ ಎಸ್ಪಿ ರಿಷ್ಯಂತ್ ಸೂಚನೆ ನೀಡಿದ್ದಾರೆ.
ಹರಿಹರ, ಮಲೇಬೆನ್ನೂರು, ನಲ್ಲೂರು ಗ್ರಾಮದಲ್ಲಿ ಎರಡು ಕೋಮುಗಳ ನಡುವೆ ಗಲಾಟೆ ನಡೆದಿತ್ತು. ವಾಟ್ಸಪ್ ಸ್ಟೇಟಸ್ ಕುರಿತು ಕೂಡ ಗಲಾಟೆ ನಡೆದಿದೆ. ಈ ಗಲಾಟೆಗಳಲ್ಲಿ ಯಾವುದೇ ಸಂಘಟನೆಗಳ ಕೈವಾಡ ಇಲ್ಲ. ಸೋಮವಾರದಿಂದ ಭಯವಿಲ್ಲದೆ ಶಾಲೆಗೆ ತೆರಳಬಹುದಾಗಿದೆ ಎಂದು ಎಸ್ಪಿ ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಹಿಜಾಬ್ ಬಗ್ಗೆ ವಿವಾದ ಸೃಷ್ಟಿಸುವವರ ಮೇಲೆ ಕಾನೂನು ಕ್ರಮ: ಬೊಮ್ಮಾಯಿ