ETV Bharat / state

ಕೊರೊನಾ ಭೀತಿ: ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಜಿಲ್ಲೆಯಾದ್ಯಂತ ನಿರ್ಬಂಧ - district for mass prayer in mosques

ಪವಿತ್ರ ರಂಜಾನ್ ಆಚರಣೆಗೆ ಸಂಬಂಧಿಸಿದಂತೆ ಇಫ್ತಾರ್ ಕೂಟ ಏರ್ಪಡಿಸುವುದಾಗಲೀ, ಮಸೀದಿಯ ಸುತ್ತಮುತ್ತ ಆಹಾರ ಪದಾರ್ಥಗಳ ಅಂಗಡಿಗಳನ್ನು ತೆರೆಯುವುದಾಗಲೀ ಮತ್ತು ಯುವಕರು ರಾತ್ರಿ ವೇಳೆ ರಸ್ತೆ, ಬೀದಿ, ಮೊಹಲ್ಲಾ ಹಾಗೂ ವೃತ್ತಗಳಲ್ಲಿ ಅನಾವಶ್ಯಕವಾಗಿ ಓಡಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

Restriction across the district for mass prayer in mosques
ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಜಿಲ್ಲೆಯಾದ್ಯಂತ ನಿರ್ಬಂಧ
author img

By

Published : Apr 28, 2020, 1:06 PM IST

ದಾವಣಗೆರೆ: ಕೊರೊನಾ ವೈರೆಸ್ ಸೋಂಕು ಹರಡದಂತೆ ತಡೆಯಲು ಲಾಕ್‍ಡೌನ್ ಜಾರಿಯಲ್ಲಿದ್ದು, ರಂಜಾನ್ ತಿಂಗಳಿನ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಯನ್ನು ಒಳಗೊಂಡಂತೆ ದೈನಂದಿನ ಸಾಮೂಹಿಕ ಪ್ರಾರ್ಥನೆಯ ಜೊತೆಗೆ ನಮಾಜ್‍ನ್ನು ಮಸೀದಿಗಳಲ್ಲಿ ನಿರ್ವಹಿಸುವುದನ್ನು ನಿರ್ಬಂಧಿಸಲಾಗಿದೆ. ಮನೆಯಲ್ಲೇ ಎಲ್ಲಾ ರೀತಿಯ ಪ್ರಾರ್ಥನೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಪ್ರವಾದಿ ಮಹಮ್ಮದ್ ಪೈಗಂಬರರು ಯಾವುದೇ ಸಾಂಕ್ರಾಮಿಕ ರೋಗ ಉಲ್ಬಣಗೊಂಡಾಗ, ಪ್ರತಿಯೊಬ್ಬರೂ ಯಾವುದೇ ಪ್ರದೇಶಗಳಿಗೆ ತೆರಳದೇ ಮನೆಯಲ್ಲಿಯೇ ಮಾಡುವ ಕುರಿತು ಉಪದೇಶಿಸಿರುವುದರಿಂದ ಮನೆಯಲ್ಲಿಯೇ ಇದ್ದುಕೊಂಡು ಉಪವಾಸ ಆಚರಣೆ ಮಾಡಬೇಕು. ಇದೇ ತಿಂಗಳ ಅಂತಿಮ ಘಟ್ಟದಲ್ಲಿ ಶಬ್-ಎ-ಖದ್ರ್ ಪವಿತ್ರ ಶುಭರಾತ್ರಿಯಲ್ಲಿ ಸಕಲ ಮಾನವ ಕುಲದ ಒಳಿತಿಗಾಗಿ ಹಾಗೂ ಕೋವಿಡ್-19 ಸೋಂಕಿನ ನಿವಾರಣೆಗಾಗಿ ಅಲ್ಲಾಹುವಿನಲ್ಲಿ ಪ್ರಾರ್ಥಿಸುವಂತೆ ಕರೆ ನೀಡಲಾಗಿದೆ.

ಪವಿತ್ರ ರಂಜಾನ್ ಆಚರಣೆಗೆ ಸಂಬಂಧಿಸಿದಂತೆ ಇಫ್ತಾರ್ ಕೂಟ ಏರ್ಪಡಿಸುವುದಾಗಲೀ, ಮಸೀದಿಯ ಸುತ್ತಮುತ್ತ ಆಹಾರ ಪದಾರ್ಥಗಳ ಅಂಗಡಿಗಳನ್ನು ತೆರೆಯುವುದಾಗಲೀ ಮತ್ತು ಯುವಕರು ರಾತ್ರಿ ವೇಳೆ ರಸ್ತೆ, ಬೀದಿ, ಮೊಹಲ್ಲಾ ಹಾಗೂ ವೃತ್ತಗಳಲ್ಲಿ ಅನಾವಶ್ಯಕವಾಗಿ ಓಡಾಡುವುದಾಗಲೀ ಮಾಡಬಾರದು.

ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ನೀಡಿರುವ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಿ. ಸಮಾಜದ ಹಿತದೃಷ್ಟಿಯಿಂದ ಶಾಂತಿ ಕಾಪಾಡುವ ಮೂಲಕ ಪವಿತ್ರ ರಂಜಾನ್ ಮಾಸಾಚರಣೆಯನ್ನು ಮಾಡಬೇಕು. ಜಿಲ್ಲೆಯಾದ್ಯಂತ ಬರುವ ಎಲ್ಲಾ ಮಸೀದಿಗಳ ವ್ಯವಸ್ಥಾಪನಾ ಕಮಿಟಿಯವರು ಈ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಪವಿತ್ರ ರಂಜಾನ್ ಮಾಸಾಚರಣೆಯನ್ನು ಅತ್ಯಂತ ಶಾಂತಿಯಿಂದ ಆಚರಿಸುವಂತೆ ದಾವಣಗೆರೆ ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಅಜಂ ಪಾಷಾ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.