ದಾವಣಗೆರೆ: ಜಿಲ್ಲೆಯಲ್ಲಿ 124 ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 20,482ಕ್ಕೇರಿದೆ.
ಸೋಂಕಿಗೆ ತುತ್ತಾಗಿ ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ದಾವಣಗೆರೆ ಜಿಲ್ಲೆಯ ಬಾಡ ಗ್ರಾಮದ 60 ವರ್ಷದ ವೃದ್ಧೆ ಬಲಿಯಾಗಿದ್ದಾರೆ. ಇದುವರೆಗೆ ಒಟ್ಟು 254 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.
ದಾವಣಗೆರೆ 52, ಹರಿಹರ 31, ಜಗಳೂರು 7, ಚನ್ನಗಿರಿ 14, ಹೊನ್ನಾಳಿ 19, ಹೊರ ಜಿಲ್ಲೆಯಿಂದ ಬಂದಿದ್ದ ಒಬ್ಬರಲ್ಲಿ ವೈರಾಣು ಇರುವುದು ಖಚಿತವಾಗಿದೆ. 81 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 19,385 ಜನರು ಡಿಸ್ಚಾರ್ಜ್ ಆಗಿದ್ದಾರೆ. 315 ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, 7,661 ಸ್ವ್ಯಾಬ್ಗಳ ರಿಪೋರ್ಟ್ ಬರಬೇಕಿದೆ.