ದಾವಣಗೆರೆ: ಡಾ. ಸರೋಜಿನಿ ಮಹಿಷಿ ವರದಿ 36 ವರ್ಷಗಳ ಹಿಂದೆಯೇ ಅನುಷ್ಠಾನಕ್ಕೆ ಬಂದಿದ್ದರೆ ಇವತ್ತು ಕನ್ನಡಿಗರಿಗೆ ನಿರುದ್ಯೋಗದ ಸಮಸ್ಯೆಯೇ ಇರುತ್ತಿರಲಿಲ್ಲ ಎಂದು ರಾಮಭಕ್ತ ಮಂಜುನಾಥ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ರಾಜ್ಯದಲ್ಲಿನ ಉದ್ಯೋಗಗಳು ಹೊರರಾಜ್ಯದವರ ಪಾಲಾಗುತ್ತಿವೆ. ಇವತ್ತು ನಮ್ಮವರಿಗೆ ಸಿಗಬೇಕಿದ್ದ ಹುದ್ದೆಗಳು ಪರರ ಪಾಲಾಗುತ್ತಿದೆ ಎಂದ ಅವರು, ಈ ವರದಿ 36 ವರ್ಷಗಳ ಹಿಂದೇಯೇ ಬಂದಿದ್ದರೆ ಇವತ್ತು ನಿರುದ್ಯೋಗವೇ ಇರುತ್ತಿರಲಿಲ್ಲ ಎಂದರು.
ಹಾಗಾಗಿ, ಕನ್ನಡಿಗರಿಗೆ 80%ರಷ್ಟು ಉದ್ಯೋಗ ಕಲ್ಪಿಸಲು ಆಗ್ರಹಿಸಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬೆಂಗಳೂರಿನ ಹೂಡಿ ಗ್ರಾಮದಿಂದ ಬೆಳಗಾವಿಯ ಸುವರ್ಣಸೌಧದವರೆಗೂ ಸುಮಾರು 520 ಕಿಲೋ ಮೀಟರ್ ಗಳ ಪಾದಯಾತ್ರೆ ಹಮ್ಮಿಕೊಂಡಿದ್ದು, ಈಗ ಪಾದಯಾತ್ರೆಯು ದಾವಣಗೆರೆಗೆ ತಲುಪಿದೆ ಎಂದರು.
ನಾವು ಮಂದೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಿದ್ದೇವೆ. ನಮ್ಮ ಹೋರಾಟ ಏನಿದ್ದರೂ ಕೂಡ ಅದು ಪಾದಯಾತ್ರೆ ಹಾಗೂ ಉಪವಾಸ ಸತ್ಯಾಗ್ರಹದ ಮೂಲಕ ನಡೆಯಲಿದೆ ಎಂದು ತಿಳಿಸಿದರು.