ETV Bharat / state

ತಂದೆ-ಮಗಳಿಗೆ ಕೊರೊನಾ ಸೋಂಕು, ಸ್ಥಳಕ್ಕೆ ರೇಣುಕಾಚಾರ್ಯ ಭೇಟಿ

ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮುಂದುವರೆಸಿದ್ದು ಇದೀಗ ನ್ಯಾಮತಿ ತಾಲೂಕಿನಲ್ಲಿ ಮೂರು ಜನರಿಗೆ ಸೋಂಕು ಪತ್ತೆಯಾಗಿದೆ.

Renukacharya
ರೇಣುಕಾಚಾರ್ಯ
author img

By

Published : Jul 14, 2020, 9:37 PM IST

ದಾವಣಗೆರೆ : ನ್ಯಾಮತಿ ತಾಲೂಕಿನಲ್ಲಿ ಮೂರು ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಎರಡು ಕಡೆ ಅಧಿಕಾರಿಗಳ ಜೊತೆ ಭೇಟಿ ನೀಡಿದ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಈ ಪ್ರದೇಶಗಳನ್ನು ಸೀಲ್​ಡೌನ್​​ ಮಾಡಿಸಿದ್ದಾರೆ‌.

ಶಾಸಕ ಎಂ ಪಿ ರೇಣುಕಾಚಾರ್ಯ
ನ್ಯಾಮತಿ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.‌ ತಂದೆ ಹಾಗೂ ಮಗಳಿಗೆ ಪಾಸಿಟಿವ್ ಬಂದಿದ್ದು, ಬಡಾವಣೆಯನ್ನು ಸೀಲ್​ಡೌನ್​​ ಮಾಡಲಾಯಿತು.‌ ತಾಲೂಕಿನ ಜಯನಗರ ಗ್ರಾಮದ ವ್ಯಕ್ತಿ ಶಿಕಾರಿಪುರಕ್ಕೆ ಹೋಗಿ ಬಂದಿದ್ದು, ಆತನಿಗೆ ಪಾಸಿಟಿವ್ ಪತ್ತೆಯಾಗಿದೆ. ಈ ಹಿನ್ನೆಲೆ ಆತನ ಮನೆಯನ್ನು ಸೀಲ್​ಡೌನ್​​ ಮಾಡಲಾಗಿದೆ. ಅಷ್ಟೇ ಅಲ್ಲ, ಆತನ ಸಂಪರ್ಕದಲ್ಲಿದ್ದ ಗ್ರಾಮದ ನಾಲ್ವರನ್ನು ಅಂಗನವಾಡಿ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಈ ಎರಡು ಗ್ರಾಮಗಳಿಗೆ ಭೇಟಿ ನೀಡಿದ ರೇಣುಕಾಚಾರ್ಯ, ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಪ್ರತಿಯೊಬ್ಬರು ಮಾಸ್ಕ್ ಧರಿಸಿ ಸೋಪಿನಿಂದ ಕೈ ತೊಳೆದುಕೊಳ್ಳಿ, ಸ್ಯಾನಿಟೈಸರ್ ಬಳಸಿ ಅನಾವಶ್ಯಕವಾಗಿ ಓಡಾಡಬೇಡಿ ಎಂದು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.