ETV Bharat / state

ತನ್ನ ಪಟಾಲಂ ರಕ್ಷಣೆಗೆ ನಿಂತಿರುವ ಜಮೀರ್ ದೇಶದ್ರೋಹಿ : ರೇಣುಕಾಚಾರ್ಯ ಆರೋಪ - ಬೆಡ್ ಬ್ಲಾಕಿಂಗ್ ದಂಧೆ

ಶಾಸಕ ಸತೀಶ್ ರೆಡ್ಡಿ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ, ಅಧಿಕಾರಿ ಮೇಲೆ ಹಲ್ಲೆ ನಡೆಸಿಲ್ಲ, ಸುಮ್ಮನೆ ಆರೋಪ ಮಾಡಲಾಗುತ್ತಿದೆ. ಅವರು ಕೂಡ ಬೆಡ್ ಬ್ಲಾಕಿಂಗ್ ದಂಧೆಯನ್ನು ಹೊರಗೆಳೆದಿದ್ದಾರೆ ಎಂದು ರೇಣುಕಾಚಾರ್ಯ ತಮ್ಮದೇ ಪಕ್ಷದ ಶಾಸಕರನ್ನು ಸಮರ್ಥಿಸಿದರು..

renukacharya-reaction-on-zameer-ahmed-khan
ತನ್ನ ಪಟಾಲಂ ರಕ್ಷಣೆಗೆ ನಿಂತಿರುವ ಜಮೀರ್ ದೇಶದ್ರೋಹಿ : ರೇಣುಕಾಚಾರ್ಯ
author img

By

Published : May 7, 2021, 9:55 PM IST

ದಾವಣಗೆರೆ : ತೇಜಸ್ವಿ ಸೂರ್ಯ ಜಾತಿ, ಧರ್ಮ ನೋಡಿ ಹಗರಣ ಹೊರ ಹಾಕಿಲ್ಲ. ಜಮೀರ್ ದೇಶ ಕಟ್ಟಿಲ್ಲ, ಅವನು ದೇಶದ್ರೋಹಿ. ತನ್ನ ಪಟಾಲಂ ರಕ್ಷಣೆಗೆ ನಿಂತಿರುವ ನೀನೊಬ್ಬ ದೇಶದ್ರೋಹಿ ಎಂದು ಶಾಸಕ ರೇಣುಕಾಚಾರ್ಯ ಶಾಸಕ ಜಮೀರ್ ವಿರುದ್ದ ಕಿಡಿ ಕಾರಿದರು.

ವೈದ್ಯರ, ಪೊಲೀಸ್ ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದವರಿಗೆ ಬೇಲ್, ಹಣ ಕೊಟ್ಟು ಕಳಿಸಿರುವ ಆರೋಪ ಮಾಡಿರುವ ರೇಣುಕಾಚಾರ್ಯ ಅಲ್ಪಸಂಖ್ಯಾತ ಜನರಿಗೆ ಮೌಢ್ಯತೆ ಬಿತ್ತುವ ಬದಲು ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುವಂತೆ ಜಮೀರ್​ ಅಹಮದ್​ಗೆ ಒತ್ತಾಯಿಸಿದ್ದಾರೆ.

ಶಾಸಕ ಸತೀಶ್ ರೆಡ್ಡಿ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ, ಅಧಿಕಾರಿ ಮೇಲೆ ಹಲ್ಲೆ ನಡೆಸಿಲ್ಲ, ಸುಮ್ಮನೆ ಆರೋಪ ಮಾಡಲಾಗುತ್ತಿದೆ. ಅವರು ಕೂಡ ಬೆಡ್ ಬ್ಲಾಕಿಂಗ್ ದಂಧೆಯನ್ನು ಹೊರಗೆಳೆದಿದ್ದಾರೆ ಎಂದು ರೇಣುಕಾಚಾರ್ಯ ತಮ್ಮದೇ ಪಕ್ಷದ ಶಾಸಕರನ್ನು ಸಮರ್ಥಿಸಿದರು.

ಇದನ್ನೂ ಓದಿ: ಶೌಚಾಲಯ ನಿರ್ಮಾಣ ವಿಚಾರವಾಗಿ ಘರ್ಷಣೆ : ಓರ್ವನ ಕೊಲೆ

ಸಚಿವ ಸುಧಾಕರ್ ಎರಡು ಖಾತೆಯನ್ನು ಸರಿಯಾಗಿ ನಿಭಾಯಿಸಿ ಎಂದು ಹೇಳಿದ್ದು, ಅದನ್ನು ಬಿಟ್ಟು ಅವರ ಮೇಲೆ ಯಾವುದೇ ಯಾವುದೇ ವೈಯಕ್ತಿಕ ದ್ವೇಷವಿಲ್ಲ, ಆಡಳಿತ ನಡೆಸಲು ವಿಫಲವಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ರೇಣುಕಾಚಾರ್ಯ ಅಭಿಪ್ರಾಯಪಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.