ETV Bharat / state

ಯುವಕನ ಕೊಂದು,  ಪ್ರಧಾನಿಗೆ ಜೀವ ಬೆದರಿಕೆ ಹಾಕಿದವರಿಗೆ ಉಗ್ರ ಶಿಕ್ಷೆಯಾಗಬೇಕು:  ರೇಣುಕಾಚಾರ್ಯ - ಕನ್ನಯ್ಯಲಾಲ್ ಹತ್ಯೆ ಕುರಿತು ರೇಣುಕಾಚಾರ್ಯ ದಾವಣಗೆರೆಯಲ್ಲಿ ಪ್ರತಿಕ್ರಿಯೆ

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ 75 ನೇ ಹುಟ್ಟುಹಬ್ಬದ ಹಿನ್ನೆಲೆ ದಾವಣಗೆರೆಯಲ್ಲಿ ನಡೆಯುತ್ತೆ ಎನ್ನಲಾದ ಸಿದ್ದರಾಮೋತ್ಸವ ಕಾರ್ಯಕ್ರಮದ ಬಗ್ಗೆ ನಾನು ಟೀಕೆ ಮಾಡೋದಿಲ್ಲ ಎಂದು ಶಾಸಕ ಎಂ. ಪಿ ರೇಣುಕಾಚಾರ್ಯ ತಿಳಿಸಿದ್ದಾರೆ.

ರೇಣುಕಾಚಾರ್ಯ
ರೇಣುಕಾಚಾರ್ಯ
author img

By

Published : Jul 4, 2022, 4:35 PM IST

ದಾವಣಗೆರೆ: ರಾಜಸ್ಥಾನದ ಉದಯಪುರದಲ್ಲಿ ಹಿಂದೂ ಟೈಲರ್​ ಕನ್ನಯ್ಯಲಾಲ್ ಎಂಬುವವರನ್ನು ಪಾಕಿಸ್ತಾನದಲ್ಲಿ ತರಬೇತಿ ಪಡೆದ ಭಯೋತ್ಪಾದಕರು ಹತ್ಯೆ ಮಾಡಿ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್​ ಮಾಡುವ ಮೂಲಕ ಪ್ರಧಾನಿ ಮೋದಿಯವರಿಗೂ ಜೀವ ಬೆದರಿಕೆ ಹಾಕಿದ್ದಾರೆ. ಇಂತಹವರನ್ನು ಗುಂಡಿಕ್ಕಿ ಕೊಂದಾಗ ಮಾತ್ರ ಹಿಂದೂಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಶಾಸಕ ಎಂ. ಪಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ಎಂ. ಪಿ ರೇಣುಕಾಚಾರ್ಯ ಅವರು ಮಾತನಾಡಿದ್ದಾರೆ

ದಾವಣಗೆರೆ ಜಿಲ್ಲೆಯ ಹೊನ್ನಾಳಿ‌ ಪಟ್ಟಣದಲ್ಲಿ ಮಾತನಾಡಿದ ಅವರು, ಕನ್ನಯ್ಯ ಲಾಲ್​​ಗೆ ಕೊಲೆ ಬೆದರಿಕೆ ಇದೆ ಎಂದು ಗೊತ್ತಿದ್ದರೂ ರಾಜಸ್ಥಾನ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ರಾಷ್ಟ್ರಪತಿಗಳಿಗೆ ಮನವಿ ಮಾಡುತ್ತೇವೆ. ಕೂಡಲೇ ರಾಜಸ್ಥಾನದ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಹತ್ಯೆ ಮಾಡಿದ ಹಂತಕರು ಬಿಜೆಪಿ ಕಾರ್ಯಕರ್ತರೇ: ಕನ್ನಯ್ಯ ಲಾಲ್​ ಹತ್ಯೆ ಮಾಡಿದವರನ್ನು ಬಿಜೆಪಿ ಕಾರ್ಯಕರ್ತರು ಎಂದು ಹುಟ್ಟಿ ಹಾಕಿ ವಿಷಯಾಂತರ ಮಾಡಬೇಕು ಎಂದು ಕಾಂಗ್ರೆಸ್ ನವರು ಈ ರೀತಿ ಮಾಡಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ, ರಾಹುಲ್ ಗಾಂಧಿ ಹಿಂದೂಗಳ ಪರವಾಗಿ ಇದೀವಿ ಎಂದು ಹೇಳಲಿ ನೋಡೋಣ. ನಾವು ಓಟ್ ಬ್ಯಾಂಕ್ ರಾಜಕಾರಣ ಮಾಡೋದಿಲ್ಲ, ಅಲ್ಪಸಂಖ್ಯಾತ ಓಲೈಕೆ ಮಾಡುತ್ತಿಲ್ಲ ಎಂದು ಹೇಳಲಿ, ಇದೇಲ್ಲ ಬೇಕು ಎಂದು ಸೃಷ್ಟಿ ಮಾಡಿದ್ದಾರೆ. ಬಿಜೆಪಿಗೂ ಅವರಿಗೆ ಸಂಬಂಧ ಇಲ್ಲ, ಕಾಂಗ್ರೆಸ್​​​ಗೆ ರಾಜ್ಯದಲ್ಲಿ ನೆಲೆ ಇಲ್ಲ. ಈ ದೇಶದಲ್ಲಿ ಕಾಂಗ್ರೆಸ್ ಎರಡೇ ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿದೆ ಎಂದು ವ್ಯಂಗ್ಯ ಮಾಡಿದರು.

ಸಿದ್ದರಾಮೋತ್ಸವದ ಬಗ್ಗೆ ನಾನು ಟೀಕೆ ಮಾಡೋದಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯಗೆ 75 ನೇ ಹುಟ್ಟುಹಬ್ಬದ ಹಿನ್ನೆಲೆ ದಾವಣಗೆರೆಯಲ್ಲಿ ನಡೆಯುತ್ತೆ ಎನ್ನಲಾದ ಸಿದ್ದರಾಮೋತ್ಸವ ಕಾರ್ಯಕ್ರದ ಬಗ್ಗೆ ನಾನು ಟೀಕೆ ಮಾಡೋದಿಲ್ಲ. ಅದು ಅವರ ವೈಯಕ್ತಿಕ ಕಾರ್ಯಕ್ರಮ. ಸಿದ್ದರಾಮಯ್ಯ ಮುಳುಗಿದ ಹಡಗಿಗೆ ನಾವಿಕ ನಾನೇ ಆಗಬೇಕು ಎನ್ನುತ್ತಿದ್ದಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ನಾನು ಮುಂಚೂಣಿಯಲ್ಲಿ ಇರಬೇಕು ಎಂದು ಪೈಪೋಟಿ ನಡೆಸುತ್ತಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಬಲಿ ಪಶು ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಮನಸ್ಸು ಕಾಂಗ್ರೆಸ್​ನಲ್ಲಿ ಇಲ್ಲ, ಅವರ ದೇಹ ಮಾತ್ರ ಇದೆ. ಹಲವು ಬಾರಿ ವೇದಿಕೆ ಮೇಲೆ ಕಾಂಗ್ರೆಸ್ ಕಿತ್ತೊಗೆಯಬೇಕು ಎಂದು ಹೇಳಿದ್ದಾರೆ. ಕಾಂಗ್ರೆಸ್ ಬಿಟ್ಟು ಬೇರೆ ಕಡೆ ಹೋಗುವ ಯೋಚನೆ ಮಾಡಿ ಎಂದು ಸಿದ್ದುಗೆ ರೇಣುಕಾಚಾರ್ಯ ಸಲಹೆ ನೀಡಿದರು.

ಕಾಂಗ್ರೆಸ್​​ಗೆ ಬಿಜೆಪಿ ಶಾಸಕರು ಸೇರ್ಪಡೆಯಾಗಲ್ಲ: ಬಿಜೆಪಿಯವರು ಒಬ್ಬಬ್ಬರೂ ಸಿಂಹದ ಮರಿಗಳು, ಮುಳುಗಿದ ಹಡಗಿಗೆ ಯಾರು ಹತ್ತಲು ಹೋಗುತ್ತಾರೆ ಹೇಳಿ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಅವರನ್ನು ನಮ್ಮ ಪಕ್ಷಕ್ಕೆ ಎಳೆಯುವ ಪ್ರಯತ್ನ ಮಾಡಲ್ಲ. ನಮ್ಮಲ್ಲಿಯೇ ಮುಖಂಡರು ಸಾಕಷ್ಟು ಜನರಿದ್ದಾರೆ. ಯಡಿಯೂರಪ್ಪ, ಬೊಮ್ಮಯಿ, ಕಟೀಲ್ ಸೇರಿದಂತೆ ಹಲವು ನಾಯಕರ ನೇತೃತ್ವದ ಮುಂದಿನ ಚುನಾವಣೆ ಹೋಗುತ್ತೇವೆ. ಅವರು ಬಂದರೆ ತಪ್ಪೇನಿದೆ. ಅವರಲ್ಲಿ ಕೂಡ ಒಳ್ಳೆಯ ನಾಯಕತ್ವ ಇದೆ. ಸಿದ್ದರಾಮಯ್ಯ ಅವರು ಒಳ್ಳೆಯ ಆಡಳಿತ ನೀಡಿದ್ದಾರೆ ಎಂದು ರೇಣುಕಾಚಾರ್ಯ ಒಪ್ಪಿಕೊಂಡರು.

ಓದಿ: ಹರ್ಷನ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಮೊಬೈಲ್ ಸಿಕ್ಕ ಬಗ್ಗೆ ತನಿಖೆ : ಆರಗ ಜ್ಞಾನೇಂದ್ರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.