ದಾವಣಗೆರೆ : ವಾಜಪೇಯಿ ಹೆಸರು ಹೇಳಲು ಯೋಗ್ಯತೆ ಇಲ್ಲದ ಬಚ್ಚಾ ಪ್ರಿಯಾಂಕ್ ಖರ್ಗೆ. ಮಾಜಿ ಪ್ರಧಾನಿ ಬಗ್ಗೆ ಟೀಕೆ ಮಾಡಲು ನಾಚಿಕೆಯಾಗಬೇಕು ಎಂದು ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಈ ಬಗ್ಗೆ ಕ್ಷಮೆ ಕೇಳಬೇಕು. ಇಲ್ಲದಿದ್ರೆ ಅಧಿವೇಷನದಲ್ಲಿ ಸರಿಯಾದ ಉತ್ತರ ಕೊಡುತ್ತೇವೆ ಎಂದರು. ಇದು ಕಾಂಗ್ರೆಸ್ ಸಂಸ್ಕೃತಿ ಎತ್ತಿ ತೋರಿಸುತ್ತದೆ. ಚತುಷ್ಪಥ ರಸ್ತೆಗಳಿಗೆ ಇದ್ದ ವಾಜಪೇಯಿ ಹೆಸರನ್ನು ಕಿತ್ತು ಹಾಕಿದಾಗ ನಿಮ್ಮ ಪೌರುಷ, ಪುರುಷತ್ವ ಎಲ್ಲಿ ಹೋಗಿತ್ತು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಚತುಷ್ಪಥ ರಸ್ತೆ ನಿರ್ಮಾತೃ ವಾಜಪೇಯಿ, ಹೈವೆಗಿದ್ದ ಅವರ ಹೆಸರನ್ನು ಕಿತ್ತಿಹಾಕಿದ್ದು ಇದೇ ಕಾಂಗ್ರೆಸ್‌ನವರಿಗೆ ನಾಚಿಕೆ ಆಗಬೇಕು, ವಾಜಪೇಯಿ ಅಜಾತಶತ್ರು, ಅವರ ಬಗ್ಗೆ ಮಾತನಾಡಲು ಪ್ರಿಯಾಂಕ್‌ಗೆ ಯೋಗ್ಯತೆ ಇಲ್ಲ, ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಇದೇ ವಿಚಾರವಾಗಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ದೇಶದಲ್ಲಿ ಹೈವೇಗಳ ಸರಮಾಲೆ ಸೃಷ್ಟಿ ಮಾಡಿದವರು, ಅಂಥವರ ಬಗ್ಗೆ ಮಾತನಾಡಬೇಕಾದರೆ ಆಲೋಚಿಸಬೇಕು ಎಂದರು.
ಸಿಪಿವೈ ದೆಹಲಿ ಪ್ರವಾಸದ ವಿಚಾರ ಮಾತನಾಡಿ, ಸಿಪಿವೈ ದೆಹಲಿಗೆ ಹೋದ್ರೆ ಬೇಡ ಅನ್ನೋಕೆ ಆಗುತ್ತಾ..?, ದೆಹಲಿಗೆ ಹೋಗಲು ಎಲ್ಲರೂ ಮುಕ್ತರು, ದೆಹಲಿಗೆ ಹೋಗೋರಿಗೆ ನಾವು ಬೇಡ ಅನ್ನೋಕಾಗಲ್ಲ ಎಂದರು.
ಆನಂದ್ ಸಿಂಗ್ ನಮ್ಮ ಜತೆಗೆ ಬಂದವರು, ನಮ್ಮೊಂದಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರು, ಅವರಿಗೆ ಪರಿಸರ ಹಾಗೂ ಪ್ರವಾಸೋದ್ಯಮ ಖಾತೆ ನೀಡಲಾಗಿದೆ, ಖಾತೆ ಅಸಮಾಧಾನದ ಬಗ್ಗೆ ಸಿಎಂ ಅವರೊಂದಿಗೆ ಚರ್ಚಿಸಿದ್ದಾರೆ, ಸಚಿವ ಸ್ಥಾನದ ರಾಜೀನಾಮೆ ನೀಡುತ್ತಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದರು.
ಓದಿ: ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ವಿನಾಕಾರಣ ಕ್ಯಾತೆ : ಸಚಿವ ಗೋವಿಂದ ಕಾರಜೋಳ