ETV Bharat / state

ದಾವಣಗೆರೆ ಯುವತಿಯರ ಹೊಡೆದಾಟಕ್ಕೆ ಬಿಗ್ ಟ್ವಿಸ್ಟ್​: ಹಲ್ಲೆ ಹಿಂದಿತ್ತು ಇಬ್ಬರ ನಡುವಿನ ಸಲಿಂಗ ಪ್ರೇಮ! - ಯುವತಿಯರ ನಡುವೆ ಜಗಳಕ್ಕೆ ಸಲಿಂಗಕಾಮವೇ ಕಾರಣ

ದಾವಣಗೆರೆಯಲ್ಲಿ ಯುವತಿಯರ ನಡುವೆ ಜಗಳವಾಗಿ, ಹಲ್ಲೆ ನಡೆಸುವ ಹಂತಕ್ಕೆ ತಲುಪಿತ್ತು. ಈ ಘಟನೆಗೆ ಕಾರಣ ಏನೆಂಬುದು ಪೊಲೀಸರ​ ವಿಚಾರಣೆಯಲ್ಲಿ ಬಯಲಾಗಿದ್ದು, ಇಬ್ಬರ ನಡುವಿನ ಸಲಿಂಗ ಪ್ರೇಮ ಹಿನ್ನೆಲೆಯಲ್ಲಿ ಹೊಡೆದಾಟ ನಡೆದಿದೆ.

reason-behind-davanagere-girls-fight-in-revealed
ದಾವಣಗೆರೆ ಯುವತಿಯರ ಹೊಡೆದಾಟಕ್ಕೆ ಬಿಗ್ ಟ್ವಿಸ್ಟ್​: ಹಲ್ಲೆ ಹಿಂದಿತ್ತು ಇಬ್ಬರ ನಡುವಿನ ಸಲಿಂಗಕಾಮ!
author img

By

Published : Oct 21, 2022, 11:40 AM IST

Updated : Oct 21, 2022, 7:22 PM IST

ದಾವಣಗೆರೆ: ನಗರದಲ್ಲಿ ನಡೆದ ಯುವತಿಯರಿಬ್ಬರ ನಡುವಿನ ಹೊಡೆದಾಟ, ಹಲ್ಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಯುವತಿಯರ ನಡುವಿನ ಸಲಿಂಗ ಪ್ರೇಮವೇ ಹಲ್ಲೆಗೆ ಪ್ರಮುಖ ಕಾರಣ ಎಂಬುದು ಪೊಲೀಸರ​ ವಿಚಾರಣೆಯಿಂದ ಬಯಲಾಗಿದೆ.

ಇಬ್ಬರು ಯುವತಿಯರ ನಡುವೆ ಜಗಳವಾಗಿ, ಅದು ಹಲ್ಲೆ ಮಾಡುವ ಹಂತಕ್ಕೆ ತಲುಪಿದ ಘಟನೆ ಇಲ್ಲಿನ ಶಾಂತಿ ನಗರದಲ್ಲಿ ಗುರುವಾರ ಸಂಜೆ ನಡೆದಿತ್ತು. ರಸ್ತೆಯಲ್ಲೇ ಯುವತಿಯೊಬ್ಬಳಿಗೆ ಮತ್ತೋರ್ವ ಯುವತಿಯು ರೇಡಿಯಂ ಕಟರ್​​ನಿಂದ ಹಲ್ಲೆ ಮಾಡಿದ್ದು, ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಏಕಾಏಕಿ ರಸ್ತೆಯಲ್ಲೇ ಯುವತಿಯರಿಬ್ಬರು ಹೊಡೆದಾಡಿಕೊಂಡು ಬಿದ್ದಿರುವುದು ಅಕ್ಕಪಕ್ಕದ ಜನರನ್ನು ಬೆಚ್ಚಿಬೀಳಿಸಿತ್ತು. ಇದೀಗ ಘಟನೆಗೆ ಕಾರಣ ಏನೆಂಬುದನ್ನು ಎಸ್​ಪಿ ಸಿಬಿ ರಿಷ್ಯಂತ್ ಅವರು ಬಹಿರಂಗಪಡಿಸಿದ್ದಾರೆ. ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಯುವತಿಯರ ನಡುವೆ ಜಗಳಕ್ಕೆ ಸಲಿಂಗ ಪ್ರೇಮವೇ ಕಾರಣವಾಗಿದೆ.

ಘಟನೆ ಬಗ್ಗೆ ಎಸ್​ಪಿ ಮಾಹಿತಿ

ಇಬ್ಬರೂ ಯುವತಿಯರು ಸಾಕಷ್ಟು ವರ್ಷಗಳಿಂದ ಸ್ನೇಹಿತರಾಗಿದ್ದು, ಬಹಳ ಅನೋನ್ಯವಾಗಿದ್ದರು. ಅಲ್ಲದೆ, ಇತ್ತೀಚೆಗೆ ಇವರಿಬ್ಬರ ನಡುವಿನ ಸ್ನೇಹವು ಸಲಿಂಗ ಪ್ರೇಮಕ್ಕೆ ತಿರುಗಿತ್ತು. ಆದರೆ, ಇವರಿಬ್ಬರಲ್ಲಿ ಒಬ್ಬಳು ಬೇರೊಂದು ಯುವತಿಯ ಜೊತೆ ಮಾತನಾಡಿ ಆತ್ಮೀಯವಾಗಿದ್ದೇ ಘಟನೆಗೆ ಪ್ರಮುಖ ಕಾರಣವಾಗಿದೆ. ಇದರಿಂದ ಕೋಪಗೊಂಡ ಯುವತಿ ತನ್ನ ಸ್ನೇಹಿತೆ ಮೇಲೆ ರೇಡಿಯಂ ಕಟರ್​ನಿಂದ ಮನಬಂದಂತೆ ಹಲ್ಲೆ ಮಾಡಿದ್ದಾಳೆ. ಯುವತಿಯ ಕುತ್ತಿಗೆ, ಕೆನ್ನೆ, ಹಾಗೂ ಕೈಗೆ ಗಂಭೀರ ಗಾಯಗಳಾಗಿದೆ. ಬಳಿಕ ತಾನೂ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ‌ ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ.

ಸದ್ಯ ಇಬ್ಬರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ‌. ಹಲ್ಲೆ ಮಾಡಿದ ಯುವತಿಯು ಚಿಕ್ಕಮಗಳೂರು ಜಿಲ್ಲೆಯ ಮೂಲದವಳೆಂದು ತಿಳಿದು ಬಂದಿದೆ. ಅವಳನ್ನು ಬಂಧಿಸಲಾಗಿದ್ದು, ಈ ಸಂಬಂಧ ವಿದ್ಯಾನಗರ ಪೊಲೀಸ್​​ ಠಾಣೆಯಲ್ಲಿ 307 ಅಡಿ ಪ್ರಕರಣ ದಾಖಲಾಗಿದೆ ಎಂದು ಎಸ್​ಪಿ ತಿಳಿಸಿದರು.

ಇದನ್ನೂ ಓದಿ: ದಾವಣಗೆರೆಯಲ್ಲಿ ಯುವತಿಯರ ನಡುವೆ ಹೊಡೆದಾಟ: ರೇಡಿಯಂ ಕಟರ್​​ನಿಂದ ಪರಸ್ಪರ ಹಲ್ಲೆ

Last Updated : Oct 21, 2022, 7:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.