ETV Bharat / state

ರಾಮಮಂದಿರ ಶಿಲಾನ್ಯಾಸ: ನಿಷೇಧಾಜ್ಞೆ ಮಧ್ಯೆಯೂ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಜಿಲ್ಲಾಡಳಿತ ಮುಂಜಾಗ್ರತ ಕ್ರಮವಾಗಿ 144 ಸೆಕ್ಷನ್​ ಜಾರಿ ಮಾಡಿದ್ದರೂ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

author img

By

Published : Aug 5, 2020, 5:54 PM IST

celebration in davanagere
ದಾವಣಗೆರೆಯಲ್ಲಿ ರಾಮನ ಭಾವಚಿತ್ರ ಮೆರವಣಿಗೆ

ದಾವಣಗೆರೆ: ಅಯೋಧ್ಯೆಯಲ್ಲಿ ರಾಮ‌ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರದಲ್ಲಿ ಪಟಾಕಿ ಸಿಡಿಸಿ, ಹಿಂದೂ ಜಾಗರಣ ವೇದಿಕೆ‌ ಕಾರ್ಯಕರ್ತರು ಹಾಗೂ ಶ್ರೀರಾಮಭಕ್ತರು ಸಂಭ್ರಮಾಚರಣೆ ಆಚರಿಸಿದರು.

ನಗರದ ಹೊಂಡ ಸರ್ಕಲ್ ಬಳಿ ಪಟಾಕಿ ಸಿಡಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ರಾಮನಿಗೆ ಜಯ ಘೋಷ ಹಾಕಲಾಯಿತು

ದಾವಣಗೆರೆಯಲ್ಲಿ ರಾಮನ ಭಾವಚಿತ್ರ ಮೆರವಣಿಗೆ

ನಿಷೇಧಾಜ್ಞೆ ಉಲ್ಲಂಘನೆ: ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಇದ್ದರೂ ಸುಮಾರು 32 ಅಡಿ ಎತ್ತರದ ಶ್ರೀರಾಮ ಮೂರ್ತಿಗೆ ಅಭಿಷೇಕ‌ ನೆರವೇರಿಸಿದರು. ಇನ್ನು ನಗರದ ವಿವಿಧೆಡೆ ಸಂಭ್ರಮದಿಂದ ಶ್ರೀರಾಮನ ದೇಗುಲಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಶಾಮನೂರು ನಗರದಲ್ಲಿ ರಾಮನ ಭಾವಚಿತ್ರ ಇಟ್ಟುಕೊಂಡು ಗ್ರಾಮದ ತುಂಬೆಲ್ಲಾ‌ ಜನರು ಮೆರವಣಿಗೆ ನಡೆಸಿದರು.

ಇನ್ನೂ ದಾವಣಗೆರೆಯಲ್ಲಿ ಮಾಜಿ ಸಚಿವ ಎಸ್. ಎ.ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ ನೇತೃತ್ವದಲ್ಲಿ ಶ್ರೀ ರಾಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ನಗರದ ಪಿಜೆ ಬಡಾವಣೆಯ ಶ್ರೀ ರಾಮ ದೇವಸ್ಥಾನದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರೊಂದಿಗೆ ಭಗವಾ ಧ್ವಜವನ್ನು ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಪ್ರದರ್ಶಿಸಿದರು.

ಭಾರತ್ ಕಾಲೋನಿ ಕೇಸರಿ ಸರ್ಕಲ್​ನಲ್ಲಿ ಹಿಂದೂ ಮಹಾಸಭಾ ಸೇನಾ ಸಮಿತಿಯಿಂದ ಶ್ರೀ ರಾಮನ ಪೂಜೆ, ಧ್ವಜಾರೋಹಣ ಮತ್ತು ಸಿಹಿ ಹಂಚಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹೋರಾಟ ಮಾಡಿದವರನ್ನು ಗೌರವಿಸಲಾಯಿತು. ನಂತರ ಸಿಹಿ ಹಂಚಿದರು. ಇಲ್ಲಿನ ದೋಬಿ ಘಾಟ್​​ನಲ್ಲಿ ಮಡಿವಾಳ ಸಮಾಜದವರು ಶ್ರೀರಾಮ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ಜೈಕಾರ ಕೂಗಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.