ETV Bharat / state

ರಾಮ ಭಕ್ತರ ಅರೆಸ್ಟ್​, ಪಿಎಫ್ಐಗಳ ಬಿಡುಗಡೆ: ಸರ್ಕಾರದ ವಿರುದ್ಧ ಆರ್​.ಅಶೋಕ್​ ಕಿಡಿ - ಹುಬ್ಬಳ್ಳಿಯಲ್ಲಿ

ವಿರೋಧ ಪಕ್ಷದ ನಾಯಕ ಆರ್​.ಅಶೋಕ್ ದಾವಣಗೆರೆಯಲ್ಲಿ ಕಾಂಗ್ರೆಸ್​ ಸರ್ಕಾರದ ವಾಗ್ದಾಳಿ ನಡೆಸಿದರು.

R ASHOK
ಆರ್​. ಅಶೋಕ್​
author img

By ETV Bharat Karnataka Team

Published : Jan 3, 2024, 12:13 PM IST

Updated : Jan 3, 2024, 1:19 PM IST

ಆರ್ ಅಶೋಕ್​ ಹೇಳಿಕೆ

ದಾವಣಗೆರೆ: ರಾಮ ಮಂದಿರ ಉದ್ಘಾಟನೆಗೆ 20 ದಿನ ಬಾಕಿ ಇದೆ. ಕರಸೇವಕರನ್ನು, ಹಿಂದೂಪರ ಹೋರಾಟಗಾರರನ್ನು ರಾಜ್ಯ ಸರ್ಕಾರ ಹೆದರಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಈ ರೀತಿ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್​. ಅಶೋಕ್​ ದೂರಿದರು.

ಹುಬ್ಬಳಿಗೆ ತೆರಳುವ ಮಾರ್ಗ ಮಧ್ಯೆ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಅವರು ಮತ್ತೊಮ್ಮೆ ನರೆಂದ್ರ ಮೋದಿಯವರು ಪ್ರಧಾನಿ ಆಗ್ತಾರೆಂದು ಸಾಕಷ್ಟು ಸಮೀಕ್ಷೆಗಳು ಹೇಳುತ್ತಿವೆ. ಇನ್ನು ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕರು ಕೂಡ ಸನಾತನ ಧರ್ಮದ ಬಗ್ಗೆ ಅವಹೇಳನ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅಯ್ಯೋಧೆ ವಿಚಾರ ಕೋರ್ಟ್​ನಲ್ಲಿ ನಡೆಯುವ ವೇಳೆ ಕಾಂಗ್ರೆಸ್​ ಸರ್ಕಾರ ರಾಮಾಯಣ ಎಂಬುದು ಕಾಲ್ಪನಿಕ, ಅದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದಿದ್ದರು. ಕಾಂಗ್ರೆಸ್​ನವರಿಗೆ ರಾಮ ಮಂದಿರ ಕಟ್ಟುವುದು ಇಷ್ಟ ಇಲ್ಲ. ಆದರೆ ನಾವು ಪ್ರಣಾಳಿಕೆಯಲ್ಲಿ ಮಂದಿರ ಕಟ್ಟುತ್ತೇವೆ ಎಂದು ಹೇಳಿದ್ದೆವು ಆ ಮಾತನ್ನು ಉಳಿಸಿಕೊಂಡಿದ್ದೇವೆ ಎಂದರು.

ಹುಬ್ಬಳ್ಳಿಯಲ್ಲಿ ಕರಸೇವಕ ಬಂಧನ ವಿಚಾರ: ಹುಬ್ಬಳ್ಳಿಯಲ್ಲಿ ಕರಸೇವಕನ ಬಂಧನವಾಗಿದೆ. ಈ ಸರ್ಕಾರ 30 ವರ್ಷದ ಹಿಂದಿನ ಪ್ರಕರಣವನ್ನು ಮರು ಆರಂಭಿಸಿದೆ. ನಾನು ಕೂಡ ಆ ಪ್ರಕರಣದ ಪ್ರತಿಯನ್ನು ನೋಡಿದೆ. ಅದರಲ್ಲಿ ಈಗಾಗಲೇ 3 ಜನ ಸಾವನ್ನಪ್ಪಿದ್ದಾರೆ. 5 ಜನ ಖುಲಾಸೆಗೊಂಡಿದ್ದಾರೆ. ಖುಲಾಸೆಗೊಂಡವರ ತೀರ್ಪು ಪ್ರತಿಯನ್ನು ನೋಡಿದೆ. ಪ್ರಕರಣಕ್ಕೆ ಸಂಬಂಧಿಸಿ ಗಲಾಟೆ ಮಾಡಿರುವುದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದು ಕೋರ್ಟ್​ ತೀರ್ಪು ನೀಡಿದೆ. ಈ ಕುರಿತು ನಾನು ನಮ್ಮ ವಕೀಲರ ಬಳಿ ಪ್ರಕರಣದ ಎಫ್​ಐಆರ್​ ಪ್ರತಿ, ದೂರು ಪ್ರತಿ ಕಳುಹಿಸು ಎಂದಿದ್ದೆ. ಆದರೆ ಸಣ್ಣ ಚಾರ್ಜ್​ ಶೀಟ್​ ಇದೆ. ಇದನ್ನು ಇಟ್ಟುಕೊಂಡು ಬಿಜೆಪಿಗೆ ಕಾನೂನು ಗೊತ್ತಿದೆಯಾ ಎಂದು ಸಿದ್ದರಾಮಯ್ಯನವರು ಕೇಳಿದ್ದಾರೆ. ನೊಟೀಸ್​ ಕೊಡಬೇಕೆಂಬ ಕಾನೂನು ನಿಮಗೆ ಗೊತ್ತಿಲ್ವಾ. ಬಂಧಿಸಿರುವ ಕರಸೇವಕ ಪೊಲೀಸ್​ ಠಾಣೆ ಎದುರೇ ರಿಕ್ಷಾ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಅವನಿಗೆ ನೊಟೀಸ್​ ಕೊಡದೆ ಯಾವ ಆಧಾರದ ಮೇಲೆ ಬಂಧನ ಮಾಡಿ ಜೈಲಿಗೆ ಕಳುಹಿಸಿದ್ದೀರಿ? ಎಂದು ಕಿಡಿಕಾರಿದರು.

ಅಯ್ಯೋಧೆ ಮಂದಿರ ಉದ್ಘಾಟನೆ ಹಿನ್ನೆಲೆ ಮನೆ ಮನೆಗೆ ಹೋಗಿ ಕಾರ್ಯಕರ್ತರು ಮಂತ್ರಾಕ್ಷತೆಯನ್ನು ಕೊಡುತ್ತಿದ್ದಾರೆ. ಜನತೆ ಮನೆಗೆ ದೇವರೇ ಬಂದಂತೆ ಸ್ವೀಕಾರ ಮಾಡುತ್ತಿದ್ದಾರೆ. ಇದೆಲ್ಲ ಕಾಂಗ್ರೆಸ್​ನವರಿಗೆ ಹೊಟ್ಟೆ ಉರಿ ಶುರುವಾಗಿದೆ. ಯಾಕೆಂದರೆ ಬಿಜೆಪಿಯವರು ಮನೆ ಮನೆಗೆ ಅಕ್ಷತೆ ಹಂಚುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್​ ಅವರು ಹೇಳಿದ್ದರು. ಆದರೆ ನಾವಲ್ಲ ಕೊಡುತ್ತಿರುವುದು ಹಿಂದೂ ಕಾರ್ಯಕರ್ತರು ಕೊಡುತ್ತಿರುವುದು ಎಂದು ಖಾರವಾಗಿಯೇ ವಿರೋಧ ಪಕ್ಷದ ನಾಯಕ ಹೇಳಿದರು.

ಪಿಎಫ್​​ಐ ದೇಶದ್ರೋಹಿಗಳ ಕೇಸ್ ವಾಪಾಸ್: ಈ ಸರ್ಕಾರ ಪಿಎಫ್​ಐ ನವರ 175 ಕೇಸ್ ಪೈಕಿ 1700 ಜನರ ಕೇಸ್ ವಾಪಾಸ್ ಪಡೆದಿದೆ. ಅವರು 40 ಕೊಲೆ ಮಾಡಿದ್ದಾರೆ ಎಂದು ಕೇರಳ ಸರ್ಕಾರ ಕೋರ್ಟ್​ಗೆ ಅಫಿಡಿವೆಟ್ ಕೊಟ್ಟಿದೆ. ಯಾವ ನೈತಿಕ ಅಧಾರದ ಮೇಲೆ ಕೇಸ್​ಗಳನ್ನು ವಾಪಾಸ್ ತೆಗೆದುಕೊಂಡದ್ದೀರಿ. ರಾಮ ಭಕ್ತರನ್ನು ಅರೆಸ್ಟ್ ಮಾಡಿ ಪಿಎಫ್ಐ ದೇಶ ದ್ರೋಹಿಗಳನ್ನು ಬಿಡುಗಡೆ ಮಾದಿದ್ದೀರಿ. ಇದರ ವಿರುದ್ಧ ಹುಬ್ಬಳ್ಳಿಯಲ್ಲಿ ಇಂದು ಹೋರಾಟ ನಡೆಸುತ್ತೇವೆ. ಕರಸೇವಕರು, ರಾಮಭಕ್ತರ ಜೊತೆ ಬಿಜೆಪಿ ಇದೆ, ಯಾರೂ ಹೆದರಬೇಕಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: 30 ವರ್ಷಗಳ ಹಿಂದಿನ ಗಲಭೆ ಕೇಸ್ ವಾಪಸ್​ ಪಡೆಯಲಿ: ಜಗದೀಶ್ ಶೆಟ್ಟರ್

Last Updated : Jan 3, 2024, 1:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.