ದಾವಣಗೆರೆ: ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮನೆಯೊಂದರಲ್ಲಿ ಟಿಇಟಿ ಪರೀಕ್ಷೆಯ ಬಂಡಲ್ ಗಟ್ಟಲೆ ಪ್ರಶ್ನೆ ಪತ್ರಿಕೆ ಪತ್ತೆಯಾಗಿರುವುದು ಈ ಅನುಮಾನ ಬಲಗೊಳ್ಳಲು ಕಾರಣವಾಗಿದೆ.
ಮೇ 26 ರಂದು ನಡೆದಿದ್ದ ಟಿಇಟಿ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಪತ್ತೆಯಾಗಿದ್ದು, ದಾವಣಗೆರೆಯ ಕೆಟಿಜೆ ನಗರದ 17 ನೇ ಕ್ರಾಸ್ ನ ಮನೆಯಲ್ಲಿ ಪ್ರಶ್ನೆ ಪತ್ರಿಕೆಗಳು ಸಿಕ್ಕಿವೆ.
ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಪರೀಕ್ಷೆ ಪ್ರಶ್ನೆ ಪತ್ರಿಕೆ ಬಂಡಲ್ ಗಟ್ಟಲೆ ಪತ್ತೆಯಾಗಿದ್ದು, ಪೊಲೀಸರ ದಾಳಿ ನಂತರ ಪ್ರಕರಣ ಬಯಲಿಗೆ ಬಂದಿದೆ. ಕೆಟಿಜೆ ನಗರ ಪೊಲೀಸರು ಪ್ರಶ್ನೆ ಪತ್ರಿಕೆ ಗಳನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.