ETV Bharat / state

ಕುಂದೂರಿನಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ.. ಬಿಗಿ ಪೊಲೀಸ್ ಬಂದೋಬಸ್ತ್..

ಈ ಕುರಿತಂತೆ ಎರಡು ಗುಂಪಿನವರು ಪರಸ್ಪರರ ಮೇಲೆ ಆರೋಪ-ಪ್ರತ್ಯಾರೋಪ ಹೊರಿಸಿ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಿಸಿದ್ದಾರೆ.

Renukacharya
ರೇಣುಕಾಚಾರ್ಯ
author img

By

Published : May 9, 2020, 11:49 AM IST

ದಾವಣಗೆರೆ : ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆಯಾದ ಪರಿಣಾಮ ಹೊನ್ನಾಳಿ ತಾಲೂಕಿನ‌ ಕುಂದೂರು ಗ್ರಾಮದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಭದ್ರಾ ಕಾಲುವೆಯೊಳಗೆ ಈಜಾಡಲು ಹೋದ ವೇಳೆ ಸಣ್ಣ ವಿಚಾರಕ್ಕೆ ಎರಡು ಗುಂಪಿನ ನಡುವೆ ಮಾತಿಗೆ ಮಾತು ಬೆಳೆದಿತ್ತು. ಇವರೆಲ್ಲ ಮರಳಿ ಗ್ರಾಮಕ್ಕೆ ಬಂದಾಗ ಅದು ಎರಡು ಸಮುದಾಯಗಳ ನಡುವೆ ಗುಂಪು ಘರ್ಷಣೆಗೆ ಕಾರಣವಾಗಿದೆ.

ಘಟನೆಯಲ್ಲಿ ಪ್ರದೀಪ್ ಹಾಗೂ ಸಲ್ಮಾನ್ ಖಾನ್ ಎಂಬುವರಿಗೆ ಗಾಯಗಳಾಗಿವೆ. ಸುದ್ದಿ ತಿಳಿಯುತ್ತಿದ್ದಂತೆ ಹೊನ್ನಾಳಿ ಸಿಪಿಐ ದೇವರಾಜ್ ಹಾಗೂ ಪಿಎಸ್ಐ ತಿಪ್ಪೇಸ್ವಾಮಿ ಗ್ರಾಮಕ್ಕೆ ಭೇಟಿ ನೀಡಿ‌ ಪರಿಸ್ಥಿತಿ ನಿಯಂತ್ರಿಸಿದ್ದಾರೆ.‌ ಸದ್ಯ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಕುರಿತಂತೆ ಎರಡು ಗುಂಪಿನವರು ಪರಸ್ಪರರ ಮೇಲೆ ಆರೋಪ-ಪ್ರತ್ಯಾರೋಪ ಹೊರಿಸಿ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಿಸಿದ್ದಾರೆ.

ಕುಂದೂರು ಗ್ರಾಮಕ್ಕೆ ಶಾಸಕ ಎಂ ಪಿ ರೇಣುಕಾಚಾರ್ಯ ಭೇಟಿ..

ಶಾಸಕ ರೇಣುಕಾಚಾರ್ಯ ಭೇಟಿ : ಕುಂದೂರು ಗ್ರಾಮಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ‌ಪಿ ರೇಣುಕಾಚಾರ್ಯ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.‌ ಎರಡು ಸಮುದಾಯಗಳ ಮುಖಂಡರನ್ನು ಭೇಟಿ‌ ಮಾಡಿ ಗ್ರಾಮದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.‌ ಮತ್ತೆ ಗಲಾಟೆಗೆ ಅವಕಾಶ ಕೊಡದೆ ಹಿರಿಯರು ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ವಿನಂತಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.