ETV Bharat / state

ಕೊರೊನಾ ಭೀತಿ: ಹರಿಹರದಲ್ಲಿ ಒಂದು ವಾರ ಬೀದಿಬದಿ ವ್ಯಾಪಾರ ಬಂದ್​ಗೆ ನಿರ್ಧಾರ

author img

By

Published : Jun 24, 2020, 7:13 PM IST

ನಗರದಲ್ಲಿ ಕೊರೊನಾ ದೃಢಪಟ್ಟ ಹಿನ್ನೆಲೆ ಒಂದು ವಾರ ಕಾಲ ಸ್ವಯಂ ಪ್ರೇರಿತವಾಗಿ ಫುಟ್​ಪಾತ್​ ವ್ಯಾಪಾರ ಬಂದ್​ ಮಾಡಲು ಬೀದಿಬದಿ ವ್ಯಾಪಾರಿಗಳ ಸಂಘ ನಿರ್ಧರಿಸಿದೆ.

Press meet
Press meet

ಹರಿಹರ: ನಗರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಕಾರಣ ಫುಟ್​​ಪಾತ್ ವ್ಯಾಪಾರವನ್ನು ಒಂದು ವಾರ ಕಾಲ ಸ್ವಯಂ ಪ್ರೇರಣೆಯಿಂದ ಬಂದ್​ ಮಾಡಲಾಗುವುದು ಎಂದು ಶ್ರೀ ಗ್ರಾಮದೇವತೆ ಬೀದಿಬದಿ ವ್ಯಾಪಾರಿಗಳ ಸಂಘದ ಗೌರವಾಧ್ಯಕ್ಷ ಹೆಚ್.ಕೆ.ಕೊಟ್ರಪ್ಪ ಹೇಳಿದರು.

ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಮುಖ್ಯ ರಸ್ತೆ, ಹಳೆ ಪಿ.ಬಿ.ರಸ್ತೆ, ಶಿವಮೊಗ್ಗ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರ ಮಾಡುತ್ತಿರುವ ಎಗ್‌ ರೈಸ್, ಗೋಬಿ ಮಂಚೂರಿ, ಪಾನಿಪೂರಿ ಸೇರಿದಂತೆ ಇತರೆ ಫುಟ್​​​ಪಾತ್ ತಿಂಡಿ ಅಂಗಡಿಗಳನ್ನು ದಿನಾಂಕ 23ರಿಂದ 29ರವರೆಗೂ ಸ್ವಯಂ ಪ್ರೇರಿತರಾಗಿ ಬಂದ್ ಮಾಡುವ ಮೂಲಕ ಕೊರೊನಾ ಹರಡದಂತೆ ಸರ್ಕಾರದ ಕ್ರಮಗಳಿಗೆ ನಾವು ಕೈಜೋಡಿಸುವ ಮೂಲಕ ಸಹಕರಿಸುತ್ತೇವೆ ಎಂದರು.

ಹಕ್ಕುಗಳ ಜೊತೆ ಕರ್ತವ್ಯಗಳನ್ನು ಪಾಲನೆ ಮಾಡುವುದು ಬಹಳ ಮುಖ್ಯ. ಸರ್ಕಾರವೇ ಎಲ್ಲವನ್ನೂ ಮಾಡಬೇಕು ಎನ್ನುವುದು ಸರಿಯಲ್ಲ. ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡು ನಡೆದುಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ನಮ್ಮ ಸಂಘವು ಜನರ ಒಳಿತಿಗಾಗಿ ಈ ತಿರ್ಮಾನವನ್ನು ಕೈ ಗೊಂಡಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.