ETV Bharat / state

ಶೀಘ್ರವೇ ಎಂಆರ್‌ಪಿಎಲ್, ಯೂರಿಯಾ ಕಾರ್ಖಾನೆಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿ ಪ್ರತಿಭಟನೆ - ಎಂಆರ್‌ಪಿಎಲ್ ಕಾರ್ಖಾನೆ

ಹರಿಹರ ತಾಲೂಕಿನ ಕನ್ನಡಪರ ಸಂಘಟನೆಗಳು ಹಾಗೂ ಹಲವಾರು ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಎಂಆರ್‌ಪಿಎಲ್ ಕಾರ್ಖಾನೆ ಹಾಗೂ ಕುರುಬರಹಳ್ಳಿ ಬಳಿ ಯೂರಿಯಾ ಉತ್ಪಾದನಾ ಕಾರ್ಖಾನೆ ಸ್ಥಾಪಿಸುವಂತೆ ಒತ್ತಾಯಿಸಿದರು.

Protest
Protest
author img

By

Published : Oct 22, 2020, 4:51 PM IST

ಹರಿಹರ: ಹನಗವಾಡಿ ಕೆಐಎಡಿಬಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಎಂಆರ್‌ಪಿಎಲ್ ಕಾರ್ಖಾನೆ ಹಾಗೂ ಕುರುಬರಹಳ್ಳಿ ಬಳಿ ಯೂರಿಯಾ ಉತ್ಪಾದನಾ ಕಾರ್ಖಾನೆಯನ್ನು ಶೀಘ್ರದಲ್ಲಿ ಆರಂಭಿಸುವಂತೆ ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ನೀರಾವರಿ ಇಲಾಖೆಯಿಂದ ಶ್ರೀನಿವಾಸ್ ನಂದಿಗಾವಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಈ ಪ್ರತಿಭಟನಾ ಮೆರವಣಿಗೆ ಶಿವಮೊಗ್ಗ ರಸ್ತೆ, ಗಾಂಧಿ ವೃತ್ತದ ಮೂಲಕ ಮಿನಿ ವಿಧಾನಸೌಧಕ್ಕೆ ಆಗಮಿಸಿ, ನಂತರ ಶಿರಸ್ತೇದಾರರಿಗೆ ಮನವಿ ಸಲ್ಲಿಸಲಾಯಿತು.

ನಂತರ ಮಾತನಾಡಿದ ಸಮಾಜ ಸೇವಕ ಶ್ರೀನಿವಾಸ್ ನಂದಿಗಾವಿ ಅವರು, ಹನಗವಾಡಿಯ ಎಂಆರ್‌ಪಿಎಲ್ ಕಾರ್ಖಾನೆ ಹಾಗೂ ಕುರುಬರಹಳ್ಳಿ ಬಳಿಯ ಯೂರಿಯಾ ಉತ್ಪಾದನಾ ಕಾರ್ಖಾನೆಗಳನ್ನು ಶೀಘ್ರದಲ್ಲಿ ಆರಂಭಿಸಲು ಸರ್ಕಾರ ಹಾಗೂ ಸಂಬಂಧಿತ ಇಲಾಖೆಯವರು ಕ್ರಮ ಕೈಗೊಳ್ಳಬೇಕು ಎಂದರು.

ಕೋವಿಡ್-19 ನಿಂದಾಗಿ ತಾಲೂಕಿನ ಆರ್ಥಿಕ ಶಕ್ತಿ ಕುಂದಿದೆ. ಯುವ ಜನಾಂಗ ನಿರುದ್ಯೋಗದಿಂದ ನರಳುತ್ತಿದ್ದು, ಈ ಎರಡು ಕಾರ್ಖಾನೆಗಳನ್ನು ಶೀಘ್ರವೇ ಆರಂಭಿಸಬೇಕು ಎಂದು ಯುವಕರು ಘೋಷಣೆಗಳನ್ನು ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ, ಕರವೇ ಅಧ್ಯಕ್ಷ ನಾಗರಾಜ್ ಮೆಹರ್‍ವಾಡೆ, ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ, ಕನಸೆ ಅಧ್ಯಕ್ಷ ಪ್ರವೀಣ್ ಹನಗವಾಡಿ, ಕದಂಬ ಸೇನೆಯ ಅಧ್ಯಕ್ಷ ಸುಧಾಕರ್, ಬಿ. ಮಂಜಪ್ಪ, ಬಿ.ಎನ್ ಮಂಜುನಾಥ್, ಜಿ.ಎಂ ನಂದನ್, ಬಿ.ಮಂಜುನಾಥ್ ಹಾಗೂ ಇತರರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.