ದಾವಣಗೆರೆ : ರಾಜಸ್ಥಾನದ ಉದಯಪುರದಲ್ಲಿ ನಡೆದ ಬಡ ಟೈಲರ್ ಶಿರಚ್ಛೇದ ಪ್ರಕರಣವನ್ನು ಖಂಡಿಸಿ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಟೈಲರನ್ನು ಹತ್ಯೆ ಮಾಡಿದ ನರಹಂತಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪ್ರತಿಭಟನಾಕಾರರು ಒತ್ತಾಯಿಸಿದರು.
ನಗರದ ಜಯದೇವ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಾಕಷ್ಟು ಜನ ಟೈಲರ್ ಗಳು ಭಾಗಿಯಾಗಿದ್ದರು. ಜೊತೆಗೆ ಕೆಲ ಮುಸ್ಲಿಂ ಟೈಲರ್ ಗಳೂ ಹತ್ಯೆಯನ್ನು ಖಂಡಿಸಿ ನರಹಂತಕರನ್ನು ಗಲ್ಲಿಗೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಈ ವೇಳೆ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಕೆ. ಜಿ ಯಲ್ಲಪ್ಪ ಮಾತನಾಡಿ, ಈ ಹತ್ಯೆಯಿಂದ ಇಡೀ ದೇಶದ ಜನರು ದಿಗ್ಭ್ರಮೆಗೊಂಡಿದ್ದಾರೆ. ಅಮಾನುಷವಾಗಿ ಬಡ ಟೈಲರ್ ಹತ್ಯೆ ಮಾಡಲಾಗಿದ್ದು, ಇದು ಖಂಡನೀಯ ಎಂದರು.
ಬಡ ಟೈಲರ್ ಕನ್ಹಯ್ಯ ಲಾಲ್ ನ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು. ಅವರ ಮಕ್ಕಳಿಗೆ ಉಚಿತ ಶಿಕ್ಷಣವನ್ನು ಒದಗಿಸಬೇಕು. ಇದಲ್ಲದೆ ದೇಶದ ಪ್ರತಿಯೊಂದು ರಾಜ್ಯದಲ್ಲಿರುವ ಬಡ ಟೈಲರ್ ಗಳಿಗೆ ಆಯಾ ಸರ್ಕಾರಗಳು ರಕ್ಷಣೆ ನೀಡಬೇಕೆಂದು ಇದೇ ವೇಳೆ ಮನವಿ ಮಾಡಿದರು.
ಓದಿ : ಮದರಸಾದಿಂದ ವಾಪಸ್ ಆಗುತ್ತಿದ್ದವನ ಮೇಲೆ ಹಲ್ಲೆ ಕೇಸ್ಗೆ ಟ್ವಿಸ್ಟ್: ಬಾಲಕನ ಕಿತಾಪತಿ ಏನ್ ಗೊತ್ತಾ!?