ETV Bharat / state

ದಾವಣಗೆರೆ: ಪೊಲೀಸ್​ ಸಿಬ್ಬಂದಿ ವಿರುದ್ಧ ಪಾಕ್​ ಪರ ಆಡಿಯೋ ಶೇರ್​ ಮಾಡಿದ ಆರೋಪ - ಕಾನ್​ಸ್ಟೇಬಲ್‌ ವಿರುದ್ಧ ಪಾಕ್ ಪರ ಆಡಿಯೋ ಶೇರ್​ ಮಾಡಿದ ಆರೋಪ

ದಾವಣೆಗೆರೆಯ ಪೊಲೀಸ್​ ಸಿಬ್ಬಂದಿಯೊಬ್ಬರು ಪಾಕಿಸ್ತಾನ ಪರ ಆಡಿಯೋ ಶೇರ್​ ಮಾಡಿರುವ ಆರೋಪ ಕೇಳಿ ಬಂದಿದೆ.

Pro Pakistan audio-sharing allegation against police constable
ಕಾನ್​ಸ್ಟೇಬಲ್‌ ವಿರುದ್ಧ ಪಾಕ್ ಪರ ಆಡಿಯೋ ಶೇರ್​ ಮಾಡಿದ ಆರೋಪ
author img

By

Published : Aug 23, 2020, 5:59 PM IST

ದಾವಣಗೆರೆ : ಪೊಲೀಸ್​ ಸಿಬ್ಬಂದಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಪರ ಆಡಿಯೋ ಶೇರ್​ ಮಾಡಿರುವ ಆರೋಪ ಕೇಳಿ ಬಂದಿದೆ.

ಪವರ್ ಆಫ್ ಪಾಕಿಸ್ತಾನ ಎಂಬ ಫೇಸ್​ಬುಕ್​ ಪೇಜ್​ ಮತ್ತು 2008 ರ ಬ್ಯಾಚ್ ಪೊಲೀಸ್ ಟೀಂ ಎಂಬ ವಾಟ್ಸ್​ ಆ್ಯಪ್​​ ಗ್ರೂಪ್​ನಲ್ಲಿ ನಗರದ ಬಸವನಗರ ಪೊಲೀಸ್ ಠಾಣೆಯ ಕಾನ್​ಸ್ಟೇಬಲ್ ಸನಾವುಲ್ಲಾ ಪಾಕಿಸ್ತಾನ ಪರ ಆಡಿಯೋ ಶೇರ್ ಮಾಡಿದ್ದಾರೆ ಎನ್ನಲಾಗಿದೆ.

2014 ರಲ್ಲಿ ಕೂಡ ಸನಾವುಲ್ಲಾ ಇದೇ ರೀತಿ ದೇಶವಿರೋಧಿ ಪೋಸ್ಟ್ ಹಾಕಿ ಸಸ್ಪೆಂಡ್ ಆಗಿದ್ದರು. ಈಗ ಮತ್ತೊಂದು ಆಡಿಯೋ ಶೇರ್​ ಮಾಡಿ ವಿವಾದಕ್ಕೊಳಗಾಗಿದ್ದಾರೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಹನುಮಂತರಾಯ ತನಿಖೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಕಾನ್​ಸ್ಟೇಬಲ್‌ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.