ದಾವಣಗೆರೆ: ಖಾಸಗಿ ಶಾಲೆಗಳ ಶುಲ್ಕ ಕಡಿತ ಆದೇಶವನ್ನು ಸರ್ಕಾರ ಯಾವುದೇ ಕಾರಣಕ್ಕೆ ಹಿಂಪಡೆಯಬಾರದು ಎಂದು ಎಂಎಲ್ಸಿ ನಾರಾಯಣಸ್ವಾಮಿ ಸರ್ಕಾರಕ್ಕೆ ಆಗ್ರಹಿಸಿದರು.
ಜಿಲ್ಲೆಯ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಮಾತನಾಡಿದ ಅವರು, ಸರ್ಕಾರ ಶುಲ್ಕ ಕಡಿತಕ್ಕೆ ಸಂಬಂಧಿಸಿ ಸುತ್ತೋಲೆ ಹೊರಡಿಸಿದೆ. ಇದು ಪೋಷಕರಿಗೆ, ಶಾಲಾ ಆಡಳಿತ ಮಂಡಳಿಗೂ ಅನುಕೂಲವಾಗಬೇಕು. ಮಕ್ಕಳು ಶಾಲೆಗೆ ಹೋಗಬೇಕು, ಶಿಕ್ಷಕರಿಗೂ ವೇತನ ದೊರೆಯಬೇಕು. ಈ ಬಗ್ಗೆ ವಿಸ್ತೃತವಾಗಿ ಚರ್ಚೆ ಮಾಡಿಯೇ ಸರ್ಕಾರ ಈ ಆದೇಶ ಹೊರಡಿಸಿದೆ. ಅಲ್ಲದೆ ಈ ಚರ್ಚೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿಯವರೂ ಇದ್ದರು. ಯಾವುದೇ ಕಾರಣಕ್ಕೂ ಈ ಆದೇಶವನ್ಮು ಹಿಂಪಡೆಯಬಾರದು ಎಂದರು.
ಮೆಡಿಕಲ್ ಕಾಲೇಜುಗಳ ಮೇಲೆ ಐಟಿ ರೇಡ್ ಕುರಿತು ಮಾತನಾಡಿದ ಅವರು, ಉಪ್ಪು ತಿಂದವರು ನೀರು ಕುಡಿಯಲೇಬೇಕು, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು. ಆದಾಯ ತೆರಿಗೆ ಪಾವತಿದೇ ಉಳಿದವರು ತೆರಿಗೆ ಪಾವತಿಸಬೇಕು. ಪ್ರಧಾನಿ ನರೇಂದ್ರ ಮೋದಿ ಕಾಲದಲ್ಲೇ ಇದು ಬಂದಿದ್ದು, ಆದಾಯ ತೆರಿಗೆ ಪಾವತಿಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾನೂನಿನ ಕೆಳಗೆ ಎಲ್ಲರೂ ಒಂದೇ. ಯಾವುದೇ ಭೇದ ಭಾವವಿಲ್ಲದೆ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.