ETV Bharat / state

ಖಾಸಗಿ ಬಸ್ ಸಂಚಾರಕ್ಕೆ ಸರ್ಕಾರ ಅಸ್ತು : ಆದ್ರೂ ರಸ್ತೆಗೆ ಬಸ್ ಇಳಿಸಲು ಮಾಲೀಕರು ಹಿಂದೇಟು - ರಸ್ತೆಗೆ ಬಸ್ ಇಳಿಸಲು ಹಿಂದೇಟು

ಕಳೆದ 2 ತಿಂಗಳಿನಿಂದ ಬಸ್​​ಗಳು ನಿಂತಿವೆ. 6 ತಿಂಗಳ ರೋಡ್ ಟ್ಯಾಕ್ಸ್ ಮನ್ನಾ ಮಾಡಬೇಕು. ಜತೆಗೆ ಇಎಂಐ ಕಂತುಗಳು ಮುಂದಿನ ದಿನಗಳಲ್ಲಿ ಕಟ್ಟುವಂತೆ ಅನುಕೂಲ ಮಾಡಿದರೆ ಮುಂದಿನ ತಿಂಗಳು (ಜುಲೈ) 1ರಂದು ಬಸ್​​ಗಳು ರಸ್ತೆಗಿಳಿಯುತ್ತವೆ. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಬಸ್​​ಗಳನ್ನು ರಸ್ತೆಗಿಳಿಸಲ್ಲ..

Davangere
ರಸ್ತೆಗೆ ಬಸ್ ಇಳಿಸಲು ಮಾಲೀಕರು ಹಿಂದೇಟು..
author img

By

Published : Jun 27, 2021, 4:20 PM IST

ದಾವಣಗೆರೆ : ಖಾಸಗಿ ಬಸ್​​ಗಳನ್ನು ರಸ್ತೆಗಿಳಿಸಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಆದರೆ, ಒಂದು ಬಸ್​​ನಲ್ಲಿ 24 (ಶೇ.50 ರಷ್ಟು) ಮಂದಿ ಪ್ರಯಾಣಿಕರು ಮಾತ್ರ ಪ್ರಯಾಣ ಮಾಡಬೇಕು ಎಂದು ಸರ್ಕಾರದ ಆದೇಶ ಖಾಸಗಿ ಬಸ್‌ಗಳ ಮಾಲೀಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕೊರೊನಾ ಸೋಂಕು ಕಡಿಮೆಯಾಗುತ್ತಿದ್ದಂತೆ ಲಾಕ್​​ಡೌನ್ ಸಡಿಲಿಸಿ ಸರ್ಕಾರ ಎಲ್ಲಾ ಕ್ಷೇತ್ರಗಳನ್ನು ತೆರೆಯಲು ಆದೇಶಿಸಿದೆ. ಆದರೆ, ಖಾಸಗಿ ಬಸ್​​ಗಳ ಸಂಚಾರಕ್ಕೆ ಅವಕಾಶ ನೀಡಿದ್ದರೂ ಕೂಡ ಬಸ್ ಮಾಲೀಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ.

ಬಸ್​​ಗಳಲ್ಲಿ ಶೇ.50 ರಷ್ಟು ಅವಕಾಶ: ಆದೇಶ ಹಿಂಪಡೆಯುವಂತೆ ಆಗ್ರಹ

ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 300 ಖಾಸಗಿ ಬಸ್​​ಗಳಿವೆ. ಬಸ್ ಸಂಚರಿಸಲು ಸರ್ಕಾರ ಕೇವಲ 24 ಆಸನಗಳಿಗೆ ಸೀಮಿತಗೊಳಿದ್ದರಿಂದ ತೆರಿಗೆ ಕಟ್ಟಲು ಮಾಲೀಕರು ಹಿಂದೇಟು ಹಾಕುವಂತಾಗಿದೆ. ರಾಜ್ಯ ಸರ್ಕಾರ ಖಾಸಗಿ ಬಸ್​​ಗಳ ಪ್ರಯಾಣ 24 ಆಸನಗಳಿಗೆ ಸೀಮಿತಗೊಳಿಸಿ ಬಸ್​​ನ 54 ಆಸನಗಳ ತೆರಿಗೆ ಕಟ್ಟಿ ಎಂಬುದು ನ್ಯಾಯವಲ್ಲ. ತೆರಿಗೆ ವಿನಾಯಿತಿ ನೀಡಿ, ಇಲ್ಲವಾದಲ್ಲಿ 24 ಆಸನಗಳಿಗೆ ಸೀಮಿತಗೊಳಿಸಿರುವ ಆದೇಶವನ್ನು ಹಿಂಪಡೆಯಿರಿ‌ ಎಂದು ಖಾಸಗಿ ಬಸ್​​ ಮಾಲೀಕರು ಆಗ್ರಹಿಸಿದ್ದಾರೆ.

ಕಳೆದ ಎರಡು ತಿಂಗಳಿನಿಂದ ಬಸ್​​ಗಳು ನಿಂತಿವೆ. 6 ತಿಂಗಳ ರೋಡ್ ಟ್ಯಾಕ್ಸ್ ಮನ್ನಾ ಮಾಡಬೇಕು. ಜತೆಗೆ ಇಎಂಐ ಕಂತುಗಳು ಮುಂದಿನ ದಿನಗಳಲ್ಲಿ ಕಟ್ಟುವಂತೆ ಅನುಕೂಲ ಮಾಡಿದರೆ ಮುಂದಿನ ತಿಂಗಳು (ಜುಲೈ) 1ರಂದು ಬಸ್​​ಗಳು ರಸ್ತೆಗಿಳಿಯುತ್ತವೆ. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಬಸ್​​ಗಳನ್ನು ರಸ್ತೆಗಿಳಿಸಲ್ಲ. ಇನ್ನು, ಮೂರು ತಿಂಗಳ ಡಿಫರೆನ್ಸ್ ಟ್ಯಾಕ್ಸ್ ಕಟ್ಟಿದ ಬಳಿಕವೇ ಬಸ್​​ಗಳನ್ನು ಹೊರ ತೆಗೆಯಬೇಕಾಗಿದ್ದರಿಂದ ತಕ್ಷಣ ಎಲ್ಲಾ ರೀತಿಯ ತೆರಿಗೆಗಳಿಗೆ ವಿನಾಯಿತಿ ನೀಡಿ ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.

ಲಾಕ್‌ಡೌನ್​​ನಿಂದಾಗಿ ಬಸ್ ಚಾಲಕರು, ನಿರ್ವಾಹಕರು ಸೇರಿದಂತೆ ಮಾಲೀಕರ ಜೀವನ ಮೂರಾಬಟ್ಟೆಯಾಗಿದೆ. ಆದ್ದರಿಂದ ಸರ್ಕಾರ ಸಂಕಷ್ಟಕ್ಕೆ ಸಿಲುಕಿದವರ ಕೈ ಹಿಡಿಯಲಿ ಎಂಬುದು ಖಾಸಗಿ ಬಸ್ ಮಾಲೀಕರ ಆಗ್ರಹವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.