ದಾವಣಗೆರೆ: ಶಕ್ತಿ ಯೋಜನೆಯನ್ನು ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಜಾರಿಗೊಳಿಸಿದೆ. ಹೈಟೆಕ್ ಬಸ್ಗಳನ್ನು ಹೊರತುಪಡಿಸಿ ಸಾಮಾನ್ಯ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಜೂನ್ 11ರಿಂದ ಅವಕಾಶ ಕಲ್ಪಿಸಿದೆ. ಆದ್ರೆ ಖಾಸಗಿ ಬಸ್ ಮಾಲೀಕರು ಇದೀಗ ದಿವಾಳಿಯಾಗುವ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಸರ್ಕಾರಿ ಬಸ್ಗಳಂತೆ ಖಾಸಗಿ ಬಸ್ಗಳಿಗೂ ಸೌಲಭ್ಯ ಕಲ್ಪಿಸಿದ್ರೆ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ನಾವು ಸಿದ್ಧ ಎಂದು ದಾವಣಗೆರೆ ಖಾಸಗಿ ಬಸ್ಗಳ ಮಾಲೀಕರು ತಿಳಿಸಿದ್ದಾರೆ.
ಇಂದು ಸಭೆ ನಡೆಸಿದ ಬಸ್ ಮಾಲೀಕರು, ಸರ್ಕಾರ ಸರ್ಕಾರಿ ಬಸ್ಗಳಿಗೆ ವಿಧಿಸುವ ನಿಯಮಗಳಂತೆ ಖಾಸಗಿ ಬಸ್ಗಳಿಗೂ ವಿಧಿಸಿದ್ರೆ ನಾವು ಬದ್ದರಾಗುತ್ತೇವೆ. ದಾವಣಗೆರೆ ಜಿಲ್ಲೆಯಲ್ಲಿಯೇ ಒಟ್ಟು 350 ಖಾಸಗಿ ಬಸ್ಸುಗಳಿವೆ. ಕನಿಷ್ಠ ಅಂದ್ರೂ ಬಸ್‌ಗಳು ದಿನಕ್ಕೆ 400 ಕಿ.ಮೀ. ಕ್ರಮಿಸುತ್ತವೆ. ಆದ್ರೆ, ಸರ್ಕಾರಿ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದರೆ, ಖಾಸಗಿ ಬಸ್ ಹತ್ತಲು ಜನ ಹಿಂದೇಟು ಹಾಕಲಿದ್ದಾರೆ. ಇದರಿಂದ ಖಾಸಗಿ ಬಸ್ಗಳನ್ನು ನಂಬಿ ಜೀವನ ಮಾಡ್ತಿರುವವರು ಬೀದಿಪಾಲಾಗುವ ಸಂಭವ ಹೆಚ್ಚು ಎಂದು ಅಳಲು ತೋಡಿಕೊಂಡಿದ್ದಾರೆ.
ಖಾಸಗಿ ಬಸ್ ಮಾಲೀಕರ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲೇಶಪ್ಪ ಈ ಕುರಿತು ಪ್ರತಿಕ್ರಿಯಿಸಿ, ''ದಾವಣಗೆರೆ ಮಾರ್ಗವಾಗಿ 15ರಿಂದ 16 ಜಿಲ್ಲೆಗಳಲ್ಲಿ ಖಾಸಗಿ ಬಸ್ಗಳ ಸಂಚಾರ ಮಾಡುತ್ತವೆ. ಇದೀಗ ಸರ್ಕಾರ ಜೂನ್11ರಿಂದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಅದೇ ರೀತಿ ಖಾಸಗಿ ಬಸ್ಗಳಲ್ಲಿ ಸಹ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಿ, ಸಾರಿಗೆ ಇಲಾಖೆಗೆ ನಿಗದಿ ಪಡಿಸಿದ ದರ ನೀಡಿ, ಮೇಲಾಗಿ ಪ್ರತಿ ಬಸ್ಸಿಗೆ ವರ್ಷಕ್ಕೆ ಎರಡು ಲಕ್ಷ ರೂಪಾಯಿ ತೆರಿಗೆ ಕಟ್ಟುತ್ತೇವೆ. ಜೊತೆಗೆ ಎಲ್ಲಾ ಕಡೆ ಸರ್ಕಾರಿ ಬಸ್ಸುಗಳು ಸಂಚರಿಸುವುದಿಲ್ಲ. ಅಂತಹ ಕಡೆಗಳಲ್ಲಿ ನಮ್ಮ ಖಾಸಗಿ ಬಸ್ ಬಳಸಿಕೊಳ್ಳಬಹುದು. ಖಾಸಗಿ ಬಸ್ಸಿನಿಂದ ಹಲವು ಜನರು ಉದ್ಯೋಗ ಪಡೆದಿದ್ದಾರೆ. ಅವರೆಲ್ಲರೂ ಈಗ ನಿರುದ್ಯೋಗಿಳಾಗುತ್ತಾರೆ'' ಎಂದು ತಿಳಿಸಿದರು.
ದಶಕಗಳಿಂದ ಸೇವೆಯಲ್ಲಿರುವ ಖಾಸಗಿ ಬಸ್ಗಳನ್ನು ಉಳಿಸಿ: 1960ರಿಂದ ಖಾಸಗಿ ಬಸ್ಗಳ ಸಂಚಾರ ದಾವಣಗೆರೆ ಜಿಲ್ಲೆಯಲ್ಲಿ ಆರಂಭವಾಗಿದ್ದು, ಇಲ್ಲಿ ತನಕ ಒಟ್ಟು 350ಕ್ಕೂ ಹೆಚ್ಚು ಬಸ್ಗಳ ಸಂಚರಿಸುತ್ತಿವೆ. ಖಾಸಗಿ ಬಸ್ ಸಂಚಾರದಿಂದ ಹಲವು ಜನರು ಬದುಕು ಕಟ್ಟಿಕೊಂಡಿದ್ದಾರೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಉಪಾಧ್ಯಕ್ಷ ಮಹೇಶ್ ಹೇಳಿದರು. ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸಿದ್ದರಿಂದ ಕುಟುಂಬಗಳು ಬೀದಿಪಾಲಾಗುವ ಸಂಭವ ದಟ್ಟವಾಗಿದೆ. ಜಿಲ್ಲೆಯಲ್ಲಿ ಕೆಎಸ್ಆರ್ಟಿ ಬಸ್ಸುಗಳು ಎಷ್ಟಿವೆಯೋ ಅಷ್ಟೇ ಖಾಸಗಿ ಬಸ್ಗಳಿವೆ. ದಶಕಗಳಿಂದ ಸೇವೆಯಲ್ಲಿ ಇರುವ ಖಾಸಗಿ ಬಸ್ಗಳನ್ನ ಉಳಿಸಿ, ನಮ್ಮನ್ನು ನಿರುದ್ಯೋಗಿಗಳಾಗಿ ಮಾಡ್ಬೇಡಿ ಬದಲಾಗಿ, ಖಾಸಗಿ ಬಸ್ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಲು ಮನವಿ ಮಾಡಿದರು.
ಇದನ್ನೂ ಓದಿ: 'ಪೊಲೀಸರು ತಮ್ಮ ಕೆಲಸ ನಿಭಾಯಿಸದಿದ್ದಲ್ಲಿ ನಮ್ಮ ಫಾರ್ಮಸಿಯಲ್ಲಿ ಬೇರೆ ಬೇರೆ ಔಷಧಗಳಿವೆ'