ETV Bharat / state

ಎಸ್​ಡಿಪಿಐ ಕಚೇರಿ ಮೇಲೆ ಪೊಲೀಸರ ದಾಳಿ: ಕಚೇರಿ ಸೀಲ್ ಮಾಡಿದ ಸಿಬ್ಬಂದಿ - ಡಿವೈಎಸ್​ಪಿ ಕನ್ನಿಕಾ ಸಿಕ್ರಿವಾಲ್

ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಎಸ್​ಡಿಪಿಐ ಮುಖಂಡರಾದ ಕಾಳಿದಾಸ ನಗರದ ಫಯಾಜ್ ಅಹ್ಮದ್, ಕೇಶವ ನಗರದ ಸೈಯದ್ ಅಶ್ಫಾಕ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಎಸ್​ಡಿಪಿಐ ಕಚೇರಿ ಮೇಲೆ ಪೊಲೀಸರ ದಾಳಿ
ಎಸ್​ಡಿಪಿಐ ಕಚೇರಿ ಮೇಲೆ ಪೊಲೀಸರ ದಾಳಿ
author img

By

Published : Sep 30, 2022, 5:43 PM IST

ದಾವಣಗೆರೆ: ಇಲ್ಲಿನ ಭಾಷಾ ನಗರದ ಮುಖ್ಯ ರಸ್ತೆಯ ಮಿಲ್ಲತ್ ಶಾಲೆ ಬಳಿ ಇರುವ ಎಸ್​ಡಿಪಿಐ ಕಚೇರಿ ಮೇಲೆ ದಾಳಿ ನಡೆಸಿದ ಪೊಲೀಸರು ಪರಿಶೀಲನೆ ನಡೆಸಿ ಸೀಲ್ ಮಾಡಿದ್ದಾರೆ. ಈ ದಾಳಿ ಎಸಿ ದುರ್ಗಾಶ್ರೀ ನೇತೃತ್ವದಲ್ಲಿ ನಡೆಸಲಾಗಿದ್ದು, ಈ ಹಿಂದೆ ಪಿಎಫ್​ಐ ಕಚೇರಿಯಾಗಿದ್ದ ಎಸ್​ಡಿಪಿಐ ಕಚೇರಿಯಲ್ಲಿ ಪಿಎಫ್ಐ ಕಾರ್ಯ ಚಟುವಟಿಕೆ ಮಾಡುತ್ತಿದ್ದ ಹಿನ್ನೆಲೆ ದಾಳಿ ನಡೆಸಲಾಗಿದೆ.

ಇಡೀ ಕಚೇರಿ ತಪಾಸಣೆ ಮಾಡಿದ ಪೊಲೀಸರು ಬಳಿಕ ಸೀಲ್ ಮಾಡಿದ್ದಾರೆ. ಇನ್ನು ಎಸ್​ಡಿಪಿಐ ಕಾರ್ಯಕರ್ತ ನಗರ ಸಮಿತಿ ಸದಸ್ಯ ಮೆಹಬೂಬ್ ಸುಬಾನಿ ಮನೆ ಕೂಡಾ ತಪಾಸಣೆ ಮಾಡಲಾಗಿದ್ದು, ಆತನ ಮನೆಯಲ್ಲಿ ಪಿಎಫ್ಐಗೆ ಸಂಬಂಧಪಟ್ಟ ಕೆಲ ದಾಖಲೆಗಳು ಪತ್ತೆಯಾಗಿವೆ. ಎಸ್​ಡಿಪಿಐನ ಕಚೇರಿಯನ್ನು ಸೀಲ್ ಮಾಡುವ ಮೂಲಕ ಅದರ ಚಾವಿಯನ್ನು ಎಸಿ ದುರ್ಗಾಶ್ರೀಗೆ ಪೊಲೀಸರು ಹಸ್ತಾಂತರ ಮಾಡಿದ್ದಾರೆ.

ಪಿಎಫ್ಐ ಹಾಗೂ ಎಸ್​ಡಿಪಿಐ ಮುಖಂಡರ ಮನೆ ಮೇಲೆ ದಾಳಿ: ದಾವಣಗೆರೆಯಲ್ಲಿ ಮತ್ತೆ ಪಿಎಫ್ಐ ಹಾಗೂ ಎಸ್​ಡಿಪಿಐ ಮುಖಂಡರ ಮನೆ ಮೇಲೆ ದಾಳಿ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಎಸ್​ಡಿಪಿಐ ಮುಖಂಡರಾದ ಕಾಳಿದಾಸ ನಗರದ ಫಯಾಜ್ ಅಹ್ಮದ್, ಕೇಶವ ನಗರದ ಸೈಯದ್ ಅಶ್ಫಾಕ್ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

ಗ್ರಾಮಾಂತರ ಡಿವೈಎಸ್​ಪಿ ಕನ್ನಿಕಾ ಸಿಕ್ರಿವಾಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಇಬ್ಬರ ಮನೆಗಳನ್ನು ಶೋಧ ಮಾಡಲಾಗಿದೆ. ಪೊಲೀಸರಿಗೆ ಸಿಗದೇ ಇಬ್ಬರು ಎಸ್​ಡಿಪಿಐ ಮುಖಂಡರಾದ ಫಯಾಜ್ ಅಹ್ಮದ್ ಹಾಗೂ ಸೈಯದ್ ಅಶ್ಫಾಕ್ ನಾಪತ್ತೆಯಾಗಿದ್ದಾರೆ. ಕಳೆದ ವಾರ ಪಿಎಫ್ಐ ಮುಖಂಡ ತಾಹೀರ್ ಹುಸೇನ್ ನಾಪತ್ತೆಯಾಗಿದ್ದ. ಇದೀಗ ಮೂವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಓದಿ: ಎಸ್​ಡಿಪಿಐ ಮತ್ತು ಪಿಎಫ್​​ಐ ಕಚೇರಿಗಳ ಮೇಲೆ ಪೊಲೀಸರ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.