ETV Bharat / state

ದಾವಣಗೆರೆ: ಕಾನೂನಿನ ನೆಪದಲ್ಲಿ ಜನರ ಮೇಲೆ ಪೊಲೀಸರ ದೌರ್ಜನ್ಯ... ಜಿಲ್ಲಾ ಕಾಂಗ್ರೆಸ್ ಆರೋಪ

ಸರ್ಕಾರಕ್ಕೆ ಹಾಗೂ ಪೊಲೀಸರಿಗೆ ಆದಾಯ ಗಳಿಸುವ ಮರಳು, ಬೆಟ್ಟಿಂಗ್ ಮುಂತಾದ ಬೇರೆ ಮೂಲಗಳಿದ್ದು ಅವರಿಂದ ದಂಡ ವಸೂಲಿ ಮಾಡಲಿ. ಬಡ ರೈತರು ಹಾಗೂ ಸಾಮಾನ್ಯ ಜನರನ್ನು ಬಿಟ್ಟುಬಿಡಿ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಆಗ್ರಹಿಸಿದ್ದಾರೆ.

District Congress
ಜಿಲ್ಲಾ ಕಾಂಗ್ರೆಸ್
author img

By

Published : Sep 10, 2020, 8:06 PM IST

ದಾವಣಗೆರೆ: ಐಎಸ್ಐ ಮಾರ್ಕ್​ನ ಪೂರ್ಣ ಹೆಲ್ಮೆಟ್ ಕಡ್ಡಾಯ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಜಿಲ್ಲಾ ಕಾಂಗ್ರೆಸ್ ಘಟಕ, ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಹೆಲ್ಮೆಟ್ ಕಂಪನಿಗಳಿಂದ ಹಣ ಪಡೆದು ಸಾರ್ವಜನಿಕರಿಂದ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಸರ್ಕಾರಕ್ಕೆ ಹಾಗೂ ಪೊಲೀಸರಿಗೆ ಆದಾಯ ಗಳಿಸುವ ಮರಳು, ಬೆಟ್ಟಿಂಗ್ ಮುಂತಾದ ಬೇರೆ ಮೂಲಗಳಿದ್ದು ಅವರಿಂದ ದಂಡ ವಸೂಲಿ ಮಾಡಲಿ. ಬಡ ರೈತರು ಹಾಗೂ ಸಾಮಾನ್ಯ ಜನರನ್ನು ಬಿಟ್ಟುಬಿಡಿ ಎಂದು ಆಗ್ರಹಿಸಿದರು.

ಹೆಲ್ಮೆಟ್​ ವಶಪಡಿಸಿಕೊಳ್ಳುತ್ತಿರುವ ಪೊಲೀಸರು
ಆಜಾದ್ ನಗರ್, ಶಾಂತಿ ಟಾಕೀಸ್, ಅಶೋಕ ಟಾಕೀಸ್ ಸೇರಿದಂತೆ ಹಳೆ ದಾವಣಗೆರೆಯಲ್ಲಿ ಗುಂಪು ಗುಂಪಾಗಿ ನಿಂತು ಪೊಲೀಸರು ದಂಡ ವಸೂಲಿ ಮಾಡುತ್ತಿರುವ ರೀತಿ ಅಮಾನವೀಯ. ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಇರದ ಕಾನೂನು ನಮ್ಮ ಜಿಲ್ಲೆಯಲ್ಲಿ ಇದೆಯೇ ಎಂದು ಪಾಲಿಕೆ ಪ್ರತಿಪಕ್ಷ ನಾಯಕ ಎ.ನಾಗರಾಜ್ ಪ್ರಶ್ನಿಸಿದರು. ಪೊಲೀಸ್ ಇಲಾಖೆಗೆ ಟಾರ್ಗೆಟ್ ನೀಡಿದ್ದು, ಒಬ್ಬೊಬ್ಬ ಎಎಸ್ಐ ಗಳಿಗೆ ಇಷ್ಟಿಷ್ಟು ಕೇಸ್ ಹಾಕಬೇಕೆಂದು ಹೇಳಲಾಗಿದೆ. ಹಾಗಾಗಿ ಪೊಲೀಸ್ ಸಿಬ್ಬಂದಿ ಟಾರ್ಗೆಟ್ ಮುಟ್ಟಲು ಮಾನವೀಯತೆ ಮರೆತು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ದೂರಿದರು.
ಚೌಕಿಪೇಟೆ, ಕಾಳಿಕಾ ದೇವಿ ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿ ಅಂಗಡಿ ಮಾಲೀಕರಿಂದ ಹಣ ಪಡೆದು ವಾಹನ ನಿಲ್ಲಿಸಲು ಅನುಕೂಲ ಮಾಡಿಕೊಡುತ್ತಿದೆ ಎಂದು ಆರೋಪಿಸಿದರು. ಅಲ್ಲಿ ಇಲ್ಲದ ಕಾನೂನು ಸಾಮಾನ್ಯ ಜನರು ಹೆಲ್ಮೆಟ್ ಧರಿಸದೆ ಇದ್ದಾಗ ಬರುತ್ತದೆಯೇ. ಸರ್ಕಾರ ಕೋವಿಡ್ 19 ಗೆ ಔಷಧಿ ಕಂಡುಹಿಡಿಯುವ ವರೆಗೂ ಜನಸಾಮಾನ್ಯರಿಂದ ದಂಡ ವಸೂಲಿ ಮಾಡಬಾರದು ಎಂದು ಪಾಲಿಕೆ ಸದಸ್ಯ ಕೆ. ಚಮನ್ ಸಾಬ್ ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.