ದಾವಣಗೆರೆ : ಈಗ ಎಲ್ಲೆಡೆ ಬರ ತಾಂಡವವಾಡುತ್ತಿದೆ. ಮಳೆಗಾಗಿ ಪ್ರಾರ್ಥನೆಗಳೂ ನಡೆಯುತ್ತಿವೆ. ದೇವಸ್ಥಾನಗಳಲ್ಲಿ ಪೂಜೆಗಳೂ ಜರುಗುತ್ತಿವೆ. ದೇಶದಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸಿ ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಪರ್ಜನ್ಯ ಹೋಮ ನೆರವೇರಿಸಲಾಯಿತು.
ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಟ್ರಸ್ಟ್ ಮತ್ತು ಬ್ರಾಹ್ಮಣ ಸಮಾಜದ ಪುರೋಹಿತರು ಈ ಹೋಮ ನಡೆಸಿದರು. ಸಕಲ ಜೀವರಾಶಿಗಳಿಗೆ ನೀರು ಅತ್ಯವಶ್ಯಕವಾಗಿ ಬೇಕು. ಆದರೆ, ಮಳೆ ಬಾರದೇ ರೈತ ಸಮೂಹ ಮಾತ್ರವಲ್ಲ, ಸಾಮಾನ್ಯ ಜನರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ವರುಣ ದೇವನ ಒಲಿಸಿಕೊಳ್ಳುವ ಸಲುವಾಗಿ ಈ ಹೋಮ ನಡೆಸಲಾಗಿದೆ.