ETV Bharat / state

ಬೇಲ್ ಮೇಲೆ ಹೊರಗಿರುವ ರಾಗಾ, ಡಿಕೆಶಿಯಿಂದ ಭ್ರಷ್ಟಾಚಾರದ ಪಾಠ : ಜೆ ಪಿ ನಡ್ಡಾ ವ್ಯಂಗ್ಯ

ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಬರುವ ಬಸವಾಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ಪರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಬೃಹತ್ ರೋಡ್ ಶೋ ನಡೆಸಿ ಮತಯಾಚಿಸಿದರು.

JP Nadda held a huge road show in Basavapatnam.
ಬಸವಾಪಟ್ಟಣದಲ್ಲಿ ಜೆ ಪಿ ನಡ್ಡಾ ಬೃಹತ್ ರೋಡ್ ಶೋ ನಡೆಸಿದರು.
author img

By

Published : Apr 29, 2023, 11:05 PM IST

ದಾವಣಗೆರೆ: ಡಿಕೆಶಿ, ರಾಗಾ, ಸೋನಿಯಾ ಎಲ್ಲರೂ ಬೇಲ್ ಮೇಲೆ ಹೊರಗಡೆ ಇದ್ದಾರೆ. ಅವರು ಭ್ರಷ್ಟಾಚಾರದ ಬಗ್ಗೆ ಪಾಠ ನಮಗೆ ಮಾಡ್ತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್​​ ನಾಯಕರಿಗೆ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಕಾಂಗ್ರೆಸ್ ವಿರುದ್ಧ ಗುಡುಗಿದರು.

ಮಾಯಕೊಂಡ ವಿಧಾ‌ನಸಭಾ ಕ್ಷೇತ್ರದ ವ್ಯಾಪ್ತಿ ಬರುವ ಬಸವಾಪಟ್ಟಣದಲ್ಲಿ ನಡೆದ ಬಿಜೆಪಿ ರೋಡ್ ಶೋ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಅರ್ಕಾವತಿ ಬಡಾವಣೆ ಹಗರಣ ಆಗಿದೆ. ಶಿಕ್ಷಕರು, ಪೊಲೀಸರು ನೇಮಕಾತಿ ಹಗರಣ ಆಗಿದ್ದು, ಸ್ಕೈ ಸ್ಟೀಲ್ ಬ್ರಿಡ್ಜ್ ಹಗರಣ ಆಗಿದ್ದು, ಕಾಂಗ್ರೆಸ್ ಅವಧಿಯಲ್ಲಿ, ಹೀಗಾಗಿ ಕಾಂಗ್ರೆಸ್ ನ್ನು ಮನೆಗೆ ಕಳುಹಿಸಿ ಎಂದು ಮನವಿ ಮಾಡಿದರು.

ಪ್ರಧಾನ ಮಂತ್ರಿ ಕಿಸಾನ್​​ ಸಮ್ಮಾನ್​ ಯೋಜನೆಯಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ, ರೈತರ ಹೆಸರನ್ನು ನೋಂದಾಯಿಸಲು ಹೇಳಿದರೆ ಸರಿಯಾದ ಸಂಖ್ಯೆಯಲ್ಲಿ ಹೆಸರುಗಳನ್ನು ನೀಡಲಿಲ್ಲ. ಆದರೆ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಆಡಳಿತಕ್ಕೆ ಬಂದ ನಂತರ 54 ಲಕ್ಷ ಜನ ರೈತರ ಹೆಸರನ್ನು ನೊಂದಾಯಿಸಿದರು. ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ರೈತನ ಖಾತೆಗೆ ಪ್ರತಿವರ್ಷವೂ ಕೇಂದ್ರ ಸರ್ಕಾರವು 6000 ಹಣ ನೀಡುತ್ತಿದೆ ಎಂದು ಹೇಳಿದರು.

ರೋಡ್​ ಶೋ ವೇಳೆ ಜ್ಯೂನಿಯರ್ ಮೋದಿ ಹವಾ: ಬಸವಾಪಟ್ಟಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ‌ ನಡ್ಡಾ ಅವರು ರೋಡ್ ಶೋ ವೇಳೆ ಜ್ಯೂನಿಯರ್ ಮೋದಿ ಕಾಣಿಕೊಂಡರು. ಜ್ಯೂನಿಯರ್ ಮೋದಿ ನೋಡಿ ಜನರು ವಿಸ್ಮಯಗೊಂಡರು. ನಡ್ಡಾ ರೋಡ್ ಶೋ ಮುನ್ನ ಜ್ಯೂನಿಯರ್ ಮೋದಿ ಮತಯಾಚಿಸಿದರು. ಸದಾನಂದ ನಾಯ್ಕ್ ಜ್ಯೂನಿಯರ್ ಮೋದಿಯನ್ನು ನೋಡಿದ ಜನ, ಮೋದಿ ಜಿ, ಮೋದಿ ಜಿ ಅಂತ ಕೈ ಕುಲುಕುತ್ತ ಸೆಲ್ಫಿಗೆ ಮುಗಿಬಿದ್ದರು. ಸದಾನಂದ ಅವರು ಉಡುಪಿ ಸಮೀಪದ ಹಿರಿಯಡ್ಕ ನಿವಾಸಿಯಾಗಿದ್ದು, ಬಿಜೆಪಿಯಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿರೋ ಜ್ಯೂನಿಯರ್ ಮೋದಿ ಎಂದೇ ಖ್ಯಾತಿ ಪಡೆದಿದ್ದಾರೆ.

ಬೆಣ್ಣೆ ದೋಸೆ ಸವಿದ ಬಿಜೆಪಿ ಜೆ ಪಿ ನಡ್ಡಾ.. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ದಾವಣಗೆರೆ ಬೆಣ್ಣೆ ದೋಸೆಯನ್ನು ಸವಿದರು. ದಾವಣಗೆರೆ ನಗರದ ಶ್ರಿ ಗುರು ಕೊಟ್ಟುರೇಶ್ವರ ಬೆಣ್ಣೆ ದೋಸೆ ಹೋಟೆಲ್ ಗೆ ಭೇಟಿ ನೀಡಿದ ಅವರು, ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಬೆಣ್ಣೆ ದೋಸೆ ಸವಿದರು. ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಬರುವ ಬಸವಾಪಟ್ಟಣದಲ್ಲಿ ಬೃಹತ್ ರೋಡ್ ಶೋದಲ್ಲಿ ಭಾಗಿಯಾಗಿ ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ಪರ ಮತಯಾಚಿಸಿದರು. ಅಲ್ಲಿಂದ ನೇರ ರಸ್ತೆ ಮಾರ್ಗ ಮೂಲಕ ದಾವಣಗೆರೆಗೆ ಆಗಮಿಸಿದ ನಡ್ಡಾ ಅವರು ಶ್ರೀ ಗುರು ಕೊಟ್ಟುರೇಶ್ವರ ಬೆಣ್ಣೆದೋಸೆ ಹೋಟೆಲ್ ಗೆ ತೆರಳಿ ಎರಡು ಎರಡು ಬೆಣ್ಣೆದೋಸೆ ಸವಿದರು. ಈ ವೇಳೆ ಸಂಸದ ಜಿಎಂ ಸಿದ್ದೇಶ್ವರ್, ಬಿಜೆಪಿ ಜಿಲ್ಲಾಧ್ಯಕ್ಷ ವಿರೇಶ್ ಹನಗವಾಡಿ, ನಡ್ಡಾ ಅವರಿಗೆ ಸಾಥ್ ನೀಡಿದರು.

ಇದನ್ನೂಓದಿ:ರಾಜ್ಯ ವಿಧಾನಸಭೆ ಚುನಾವಣೆ: ಮತದಾನ ಮಾಡಿದ ಹಿರಿಯ ನಟಿ ಡಾ. ಎಂ. ಲೀಲಾವತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.