ETV Bharat / state

ಮಹಿಳಾ ಸಬಲೀಕರಣಕ್ಕಾಗಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ - exhibition and sales fair

ದಾವಣಗೆರೆಯ ಹರಿಹರ ಅರ್ಬನ್‌ ಕೋಆಪರೇಟಿವ್‌ ಬ್ಯಾಂಕ್‌ ಸಮುದಾಯ ಭವನದಲ್ಲಿ ಜರುಗಿದ ಮೇಳದಲ್ಲಿ ಜೈನ್ ಸಮುದಾಯ ಮಹಿಳೆಯರು ತಾವೇ ಮನೆಯಲ್ಲಿ ತಯಾರಿಸಿದ್ದ ಲೋಕಲ್‌ ಮಂಡಕ್ಕಿಯಿಂದ ಹಿಡಿದು ನಾರ್ಥ್​ ಇಂಡಿಯಾ ಶೈಲಿಯ ಕುರುಕಲು ತಿಂಡಿಗಳನ್ನು ಪ್ರದರ್ಶನಕ್ಕಿರಿಸಲಾಗಿತ್ತು.

ಮಾರಾಟ ಮೇಳ
ಮಾರಾಟ ಮೇಳ
author img

By

Published : Mar 23, 2021, 3:58 PM IST

ದಾವಣಗೆರೆ: ಜೈನ ಸಮುದಾಯದ ಹೆಣ್ಣು ಮಕ್ಕಳು ಆರ್ಥಿಕವಾಗಿ ಸಬಲರಾಗಲು ಜೈನ‌ ಇಂಟರ್‌ನ್ಯಾಷನಲ್‌ ಟ್ರೇಡ್‌ ಆರ್ಗನೈಸೇಷನ್‌ ಸಂಸ್ಥೆ ಹೊಸ ಯೋಜನೆಯೊಂದನ್ನು ರೂಪಿಸಿದೆ.

ದಾವಣಗೆರೆಯ ಹರಿಹರ ಅರ್ಬನ್‌ ಕೋಆಪರೇಟಿವ್‌ ಬ್ಯಾಂಕ್‌ ಸಮುದಾಯ ಭವನದಲ್ಲಿ ಜರುಗಿದ ಮೇಳದಲ್ಲಿ ಜೈನ ಸಮುದಾಯ ಮಹಿಳೆಯರು ತಾವೇ ಮನೆಯಲ್ಲಿ ತಯಾರಿಸಿದ್ದ ಲೋಕಲ್‌ ಮಂಡಕ್ಕಿಯಿಂದ ಹಿಡಿದು ನಾರ್ಥ್​ ಇಂಡಿಯಾ ಶೈಲಿಯ ಕುರುಕಲು ತಿಂಡಿಗಳನ್ನು ಪ್ರದರ್ಶನಕ್ಕಿರಿಸಲಾಗಿತ್ತು.

ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಜೈನ್‌ ಇಂಟರ್‌ನ್ಯಾಷನಲ್‌ ಟ್ರೇಡ್‌ ಆರ್ಗನೈಸೇಷನ್‌ ವತಿಯಿಂದ ಆತ್ಮ ನಿರ್ಭರ ಯೋಜನೆಯಡಿಯಲ್ಲಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಿದ್ದರು. ಈ ಸಂಸ್ಥೆ ವಿದೇಶಗಳಲ್ಲಿ 12 ಹಾಗೂ ದೇಶದಲ್ಲಿ 67 ಕೇಂದ್ರಗಳನ್ನು ಹೊಂದಿದೆ. ಸೇವೆ, ಜ್ಞಾನ ಹಾಗೂ ಮಹಿಳಾ ಸಬಲೀಕರಣದ ಹಿನ್ನೆಲೆ ಕಾರ್ಯನಿರ್ವಹಿಸುತ್ತಿದೆ.

ಮನೆಯಲ್ಲೇ ಸಿದ್ಧಪಡಿಸಿದ ಅಲಂಕಾರಿಕ ವಸ್ತುಗಳು, ಕುರುಕಲು ತಿಂಡಿಗಳು, ಮಸಾಲೆ ಸಾಮಗ್ರಿಗಳು, ವಿವಿಧ ಹಣ್ಣಿನ ಪಾನೀಯಗಳು, ಚಹಾಕ್ಕೆ ಬೆರಸುವ ಮಸಾಲೆ, ಫ್ಯಾನ್ಸಿ ಪರ್ಸ್‌ ಸೇರಿದಂತೆ ಬಗೆ ಬಗೆಯ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ. ಬಿಡುವಿನ ವೇಳೆಯಲ್ಲಿ ಮಹಿಳೆಯರು ತಯಾರಿಸುವ ಎಲ್ಲಾ ಬಗೆಯ ವಸ್ತುಗಳಿಗೆ ಪ್ಯಾಕಿಂಗ್‌, ಬ್ರಾಂಡಿಂಗ್‌, ಸೇಲ್ಸ್‌ ಬಗ್ಗೆ ಈ ಸಂಸ್ಥೆ ತರಬೇತಿ ನೀಡುತ್ತದೆ. ಮಾತ್ರವಲ್ಲದೇ ಅಗತ್ಯವುಳ್ಳ ಅರ್ಹರಿಗೆ ಧನಸಹಾಯವನ್ನೂ ಮಾಡುತ್ತಿದೆ.

ಮಹಿಳಾ ಸಬಲೀಕರಣಕ್ಕಾಗಿ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ

ದೇಶದ ಆರ್ಥಿಕ ಪ್ರಗತಿಯಲ್ಲಿ ಹೆಣ್ಣು-ಗಂಡೆಂಬ ಭೇದವಿಲ್ಲದೇ ಅವರವರ ಶಕ್ತಾನುಸಾರ ತೊಡಗಿಸಿಕೊಳ್ಳಬೇಕು ಎಂಬುದು ಜಿತೋ ಉದ್ದೇಶವಾಗಿದೆ. ಈ ಹಿನ್ನೆಲೆ ಮಹಿಳೆಯರಿಗೆ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಬೇಕಾದ ಸೌಲಭ್ಯಗಳನ್ನು ಸೃಷ್ಟಿಸುತ್ತಿದೆ. ಮಹಿಳಾ ಸಬಲೀಕರಣದಲ್ಲಿ ಇದೊಂದು ವಿಶಿಷ್ಟ ಪ್ರಯೋಗವಾಗಿದ್ದು, ಇತರರಿಗೂ ಮಾದರಿಯಾಗಲಿದೆ.

ಇದನ್ನೂ ಓದಿ .. ನಮ್ಮ ಬೇಡಿಕೆ ಒಪ್ಪುವವರೆಗೆ ಸದನದಲ್ಲಿ ಧರಣಿ ಮುಂದುವರೆಸುತ್ತೇವೆ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.