ದಾವಣಗೆರೆ : ವಿಜಯೇಂದ್ರನೇ ಡಿ ಫ್ಯಾಕ್ಟರ್ ಸಿಎಂ. ಯಡಿಯೂರಪ್ಪ ಡಿ ಜೀರೋ ಸಿಎಂ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ 20-25 ಪರ್ಸೆಂಟ್ ಸರ್ಕಾರ. ಲಂಚ ಇಲ್ಲದೆ ಏನೂ ಆಗುತ್ತಿಲ್ಲ ಆರೋಪಿಸಿದರು.
ಸರ್ಕಾರದಲ್ಲಿ ಭ್ರಷ್ಟಾಚಾರ ಇರುವುದು ಸತ್ಯ : ಭ್ರಷ್ಟಚಾರ ಮಾಡುತ್ತಿರುವುದು ಸತ್ಯ. ಯಡಿಯೂರಪ್ಪ ಅವರ ಮಗ ಹಾಗೂ ಅಳಿಯ ಬ್ಯಾಂಕ್ ಮುಖಾಂತರ ಲಂಚ ತೆಗೆದುಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಅವರ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸರ್ಕಾರದಲ್ಲಿ ಲಂಚ ಇರುವುದು ಸತ್ಯ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಶ್ರೀರಾಮುಲು ಪಿಎ ರಾಜಣ್ಣ ಭ್ರಷ್ಟಾಚಾರ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಮಾಜ ಕಲ್ಯಾಣ ಸಚಿವರ ಆಪ್ತ ಸಹಾಯಕ ಅರೆಸ್ಟ್ ಆಗಿದ್ದಾರೆ. ಯಡಿಯೂರಪ್ಪನವರ ಮಗ ಕಂಪ್ಲೇಂಟ್ ಮಾಡಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ಇಡೀ ಸರ್ಕಾರದಲ್ಲಿ ಲಂಚ ಇಲ್ಲದೆ ಏನೂ ಕೆಲಸ ಆಗೋದಿಲ್ಲ ಎಂದರು.
ಸಿದ್ದರಾಮಯ್ಯನವರ ಪಾಪದ ಕೊಡ ತುಂಬಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಸುಳ್ಳು ಹೇಳ್ತಾ ಹೋಗ್ತಾರೆ. ಅವರೇನು ನಮ್ಮ ಪಕ್ಷದವರಾ?, ಅವರು ಹೇಳಿದ್ದೆಲ್ಲ ವೇದವಾಕ್ಯ ಅಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಜಗಳ, ಗುಂಪುಗಾರಿಕೆ ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಚುನಾವಣೆ ಆದ ಮೇಲೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಶಾಸಕರು, ಸಿಎಲ್‌ಪಿ ನಾಯಕನನ್ನು ಆಯ್ಕೆ ಮಾಡ್ತಾರೆ ಎಂದರು.
ಇನ್ನು, ಅನೇಕ ದಿನಗಳಿಂದ ಕೋವಿಡ್ನಿಂದ ಮೃತಪಟ್ಟವರಿಗೆ ಪರಿಹಾರ ಕೊಡಿ ಎಂದು ಒತ್ತಾಯಿಸಿದ್ದೇವೆ. ಸುಪ್ರಿಂಕೋರ್ಟ್ ಈಗ ಹೇಳಿದೆ. ಕೋವಿಡ್ನಿಂದ ಮೃತರಾದರೆ ಪರಿಹಾರ ಕೊಡಲೇಬೇಕು ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯನವರ ನೇತೃತ್ವದಲ್ಲೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತೆ : ಡಾ. ಯತೀಂದ್ರ ಸಿದ್ದರಾಮಯ್ಯ