ETV Bharat / state

ಹಬ್ಬದ ಸಂಭ್ರಮದಲ್ಲೇ ಪತ್ನಿಯ ಕತ್ತು ಸೀಳಿದ ವೃದ್ಧ: 50 ವರ್ಷಗಳ ಸಂಸಾರ ದುರಂತ ಅಂತ್ಯ! - ದಾವಣಗೆರೆ ವೃದ್ಧೆ ಹತ್ಯೆ

ಚಾಕುವಿನಿಂದ ಕತ್ತು ಸೀಳಿ ವೃದ್ಧ ಪತಿಯೋರ್ವ ತನ್ನ 70 ವರ್ಷದ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ದಾವಣಗೆರೆಯ ಹೆಗಡೆ ನಗರದಲ್ಲಿ ಈ ಘಟನೆ ನಡೆದಿದೆ.

Old Man brutally murdered his wife at Davangere
ಚಾಕುವಿನಿಂದ ಕತ್ತು ಸೀಳಿ ವೃದ್ಧೆ ಭೀಕರ ಹತ್ಯೆ
author img

By

Published : Oct 10, 2022, 12:41 PM IST

Updated : Oct 10, 2022, 5:13 PM IST

ದಾವಣಗೆರೆ: ಈದ್ ಮಿಲಾದ್ ಹಬ್ಬದ ಸಂಭ್ರಮದ ನಡುವೆಯೇ ವೃದ್ಧನೋರ್ವ ತನ್ನ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿರುವ ಭೀಭತ್ಸ ಘಟನೆ ಇಲ್ಲಿನ ಅಜಾದ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೆಗಡೆ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ. ಹಬ್ಬದ ಸಂಭ್ರಮದಲ್ಲಿದ್ದ ಅಕ್ಕಪಕ್ಕದ ಜನರು ವೃದ್ಧೆ ಹತ್ಯೆ ಕಂಡು ಬೆಚ್ಚಿಬಿದ್ದಿದ್ದಾರೆ.

ಹೆಗಡೆ ನಗರದ ಷಾಕೀರಾಬಾನ (70) ಕೊಲೆಯಾದ ವೃದ್ಧೆ, ಚಮನ್ ಸಾಬ್ (78) ಕೊಲೆ ಮಾಡಿದ ಪತಿ. ವೃದ್ಧ ದಂಪತಿಯು ಕಳೆದ 50 ವರ್ಷಗಳಿಂದ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದರು. ಆದರೆ ಅದೇನಾಯಿತೋ ಏನೋ ಭಾನುವಾರ ಚಮನ್ ಸಾಬ್ ತನ್ನ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ. ಇಬ್ಬರು ಗಂಡು ಮಕ್ಕಳಿದ್ದರೂ ಕೂಡ ದಂಪತಿ ಅವರ ಆಸರೆ ಪಡೆಯದೆ ಜೀವನ ಸಾಗಿಸುತ್ತಿದ್ದರು.

Old Man brutally murdered his wife at Davangere
ಚಾಕುವಿನಿಂದ ಕತ್ತು ಸೀಳಿ ವೃದ್ಧೆ ಭೀಕರ ಹತ್ಯೆ

ಗಾರೆ ಕೆಲಸ ಮಾಡುತ್ತಿದ್ದ ಚಮನ್ ಸಾಬ್ ಅವರಿಗೆ ಮಾನಸಿಕ ಕಾಯಿಲೆ ಇತ್ತು, ಅದ್ದರಿಂದ ಮಕ್ಕಳು ಕೆಲಸ ಬಿಡಿಸಿ ಮನೆಯಲ್ಲಿಯೇ ಇಟ್ಟಿದ್ದರು. ನಿನ್ನೆ ಈದ್ ಮಿಲಾದ್ ಆಚರಣೆ ಬಳಿಕ ರಾತ್ರಿ ದಂಪತಿ ನಡುವೆ ಜಗಳವಾಗಿದೆ. ಕೊನೆಗೆ ವೃದ್ಧ ಮಡದಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಮಗ ಮಹಮ್ಮದ್ ಅಲಿ ತಿಳಿಸಿದರು.

ಪತ್ನಿಯ ಕತ್ತು ಸೀಳಿದ ವೃದ್ಧ

ಕೊಲೆಯಾದ ವೃದ್ಧೆಯ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದ್ದು, ಆರೋಪಿಯನ್ನು ಅಜಾದ್ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಎಸ್​​ಪಿ ಸಿಬಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್​ಪಿ, ವೃದ್ದ ಚಮನ್ ಸಾಬ್ ಹಲವು ವರ್ಷಗಳಿಂದಲೂ ಕೂಡ ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದ ಎನ್ನಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ, ವೃದ್ಧನನ್ನು ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಮಂಗಳೂರು: ಫ್ಯಾನ್​​ಗೆ ನೇಣು ಬಿಗಿದು ದಂಪತಿ ಆತ್ಮಹತ್ಯೆ!

Last Updated : Oct 10, 2022, 5:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.