ETV Bharat / state

ನ್ಯೂಟ್ರಿ ಸಿರಿಧಾನ್ಯಗಳ ಮೇಳ: ಆರೋಗ್ಯ ವೃದ್ಧಿಸುವ ಸಾವಯವ ತರಹೇವಾರಿ ಅಕ್ಕಿಗೆ ಮನಸೋತ ಜನ - ದಾವಣಗೆರೆ ಡುಟೆ ನ್ಯೂಸ್

ದಾವಣಗೆರೆಯಲ್ಲಿ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ನ್ಯೂಟ್ರಿ ಸಿರಿಧಾನ್ಯಗಳ ಮೇಳವನ್ನು ಆಯೋಜನೆ ಮಾಡಿದೆ.

Nutri Millet fair in davangere
ನ್ಯೂಟ್ರಿ ಸಿರಿಧಾನ್ಯಗಳ ಮೇಳ
author img

By

Published : Dec 6, 2021, 11:03 PM IST

ದಾವಣಗೆರೆ: ತರಳಬಾಳು ಕೃಷಿ ವಿಜ್ಞಾನ ಕೇಂದ್ರ ನಗರದಲ್ಲಿ ನ್ಯೂಟ್ರಿ ಸಿರಿಧಾನ್ಯಗಳ ಮೇಳವನ್ನು ಆಯೋಜನೆ ಮಾಡಿದೆ. ಇದರಲ್ಲಿ ತರಹೇವಾರಿ ಖಾದ್ಯಗಳನ್ನು ತಯಾರು ಮಾಡಿ ಮಾರಾಟಕ್ಕಿಡಲಾಗಿದೆ.

ದಾವಣಗೆರೆಯಲ್ಲಿ ನಡೆದ ನ್ಯೂಟ್ರಿ ಸಿರಿಧಾನ್ಯಗಳ ಮೇಳ

ಎರಡು ದಿನಗಳ ಕಾಲ ಈ ಮೇಳ ನಡೆಯಲಿದ್ದು, ಅನೇಕ ಅಂಗಡಿಗಳನ್ನು ಹಾಕಲಾಗಿದೆ. ಈ ಮೇಳದಲ್ಲಿ ಸಾಕಷ್ಟು ಜನ ಭಾಗಿಯಾಗಿ ತಮಗಿಷ್ಟವಾದ ಸಿರಿಧಾನ್ಯಗಳನ್ನು ಹಾಗೂ ಅದರ ಖಾದ್ಯಗಳನ್ನು ಖರೀದಿಸುತ್ತಿದ್ದ ದೃಶ್ಯಗಳು ಕೇಳಿ ಬಂದವು.

ಸಿರಿಧಾನ್ಯಗಳಿಂದ ತಯಾರಾದ ರಾಗಿ ಅಪ್ಪಳ, ಸೆಂಡಗಿ, ಅವಲಕ್ಕಿ,ಆರ್ಗನಿಕ್ ಬೆಲ್ಲ, ಹಿಮಾಲಯದ ಉಪ್ಪು, ಜೋಳ, ಭತ್ತದ ಅವಲಕ್ಕಿ, ಸಿರಿಧಾನ್ಯಗಳಿಂದ ತಯಾರಿಸಿದ ಮಾಲ್ಟ್, ಕರಿ ಬಣ್ಣದ ದ್ರಾಕ್ಷಿ, ಗಾಣದಿಂದ ತೆಗೆದ ಸಾವಯವ ಅಡುಗೆ ಎಣ್ಣೆ, ಬೆಟ್ಟದ ನೆಲ್ಲಿಕಾಯಿ ಜ್ಯೂಸ್, ತರಹೇವಾರಿ ಉಪ್ಪಿನ ಕಾಯಿ ಹೀಗೆ ಜನರ ಆರೋಗ್ಯ ವೃದ್ಧಿಸುವಂತಹ ಖಾದ್ಯಗಳನ್ನು ಮಾರಾಟಕ್ಕಿಡಲಾಗಿತ್ತು.

rice
ಗಮನ ಸೆಳೆದ ಸಾವಯವ ಅಕ್ಕಿ

ಮೇಳದಲ್ಲಿ ಸಿರಿಧಾನ್ಯ ಮಾತ್ರವಲ್ಲದೇ ಸಾವಯವವಾಗಿ ಬೆಳೆದ ತರಹೇವಾರಿ ಅಕ್ಕಿಯನ್ನು ಮಾರಾಟಕ್ಕೆ ಇಡಲಾಗಿತ್ತು. ಹರಿಹರ ತಾಲೂಕಿನ ಕುಂಬಳೂರು ಗ್ರಾಮದ ಆಂಜನೇಯರವರು ಮೇಳದಲ್ಲಿ 15ಕ್ಕೂ ಅಧಿಕ ರೀತಿಯ ಅಕ್ಕಿಗಳನ್ನು ಮಾರಾಟ ಮಾಡಲು ತಂದಿದ್ದರು. ಅಂದನೂರು ಸಣ್ಣ, ಗಿರಿ ಸಾಳೆ, ಸಿದ್ದು ಸಣ್ಣ, ಸಿಂಧನೂರು ಮಧುಸಾಲೆ, ಗಂಧ ಸಾಲೆ, ಚಿನ್ನಪೊನ್ನಿ, ದೊಡ್ಡಭೈರಗಲ್ಲು ರತನ್ ಸಾಗರ್, ಸಿದ್ಧ ಸಣ್ಣ, ಸೇಲಂ ಸಣ್ಣ ಹೀಗೆ ವಿವಿಧ ಬಗೆಯ ತಳಿಯ ಅಕ್ಕಿಯನ್ನು ಮಾರಾಟ ಮಾಡಿದರು.

ಇದನ್ನೂ ಓದಿ: ನೀವು ಮಾಡಿದ ತಪ್ಪಿಗೆ ಜೈಲು ಸೇರಿದ್ರಿ.. ಇದರಲ್ಲಿ ಬಿಜೆಪಿ ತಪ್ಪೇನಿದೆ: ಡಿಕೆಶಿಗೆ ಸಚಿವ ಬಿ.ಸಿ. ಪಾಟೀಲ್​ ಪ್ರಶ್ನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.