ದಾವಣಗೆರೆ: ರಾಜ್ಯದಲ್ಲಿ ಆಕ್ಸಿಜನ್ ಮತ್ತು ರೆಮ್ಡಿಸಿವರ್ ಔಷಧಿಗಳ ಕೊರತೆ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ಲಾಕ್ಡೌನ್ ಮುಂದುವರೆಸುವಂತೆ ಬಹುತೇಕ ಸಚಿವರ ಅಭಿಪ್ರಾಯವಾಗಿದೆ. ಸಿಎಂಗೆ ಈ ಬಗ್ಗೆ 22 ರಂದು ಅಥವಾ 23ರ ಸಭೆ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ರಾಜ್ಯಕ್ಕೆ ರೆಮ್ಡಿಸಿವರ್ ಹತ್ತು ಲಕ್ಷ ವೈಲ್ ಬಂದಿದ್ದು, ಯಾವುದೇ ತೊಂದರೆ ಇಲ್ಲ. ರಾಜ್ಯದಲ್ಲಿ ಲಸಿಕೆ ಪ್ರಮಾಣ ಹೆಚ್ಚು ಮಾಡಿದ್ರೆ ಕೊರೊನಾ ಸೋಂಕು ಕಡಿಮೆ ಆಗಲಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕಿನ ಪ್ರಮಾಣ ಈ ಹಿಂದೆ ಶೇಕಡಾ 47 ರಷ್ಟುಇತ್ತು. ಈಗ 27ಕ್ಕೆ ಇಳಿಕೆಯಾಗಿದೆ. ಇಡೀ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಆಗಿದ್ದು, ಒಂದು ವಾರದಲ್ಲಿ ಇನ್ನಷ್ಟು ಇಳಿಕೆ ಆಗುವ ಲಕ್ಷಣಗಳಿವೆ ಎಂದರು.
ಇನ್ನು ದಾವಣಗೆರೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಶೇಕಡಾ 18 ರಿಂದ 20 ಇತ್ತು. ಈಗ ಶೇಕಡಾ 29ಕ್ಕೆ ಏರಿದೆ. ಇದು ಕೂಡ ಕಡಿಮೆಯಾಗಲಿದೆ ಎಂದರು.