ದಾವಣಗೆರೆ: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಫೋನ್ ಟ್ಯಾಪಿಂಗ್ ಪ್ರಕರಣದ ಬಗ್ಗೆ ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ಹಿಂದಿನಿಂದ ಎಲ್ಲಾ ಸರ್ಕಾರಗಳಲ್ಲೂ ಆಗಿದೆ. ಅದನ್ನು ಯಾರಾದರೂ ಮಾಡಬಹುದು. ಇದೇನು ಹೊಸದಲ್ಲ ಎಂದಿದ್ದಾರೆ.
ಫೋನ್ ಕದ್ದಾಲಿಕೆ ಬಗ್ಗೆ ಕಾಂಗ್ರೆಸ್ನವರು ಒಂದು ಹೇಳುತ್ತಾರೆ, ಜೆಡಿಎಸ್ನವರು ಇನ್ನೊಂದು ಹೇಳುತ್ತಾರೆ. ಇತ್ತ ಬಿಜೆಪಿಯವರು ಮತ್ತೊಂದು ಹೇಳುತ್ತಾರೆ. ಹೀಗಾಗಿ ತನಿಖೆ ಮಾಡಿಸುವುದನ್ನು ಬಿಟ್ಟು, ಸುಮ್ಮನಿರುವುದೇ ಒಳ್ಳೆಯದು ಎಂದು ಶಾಮನೂರು ಅಭಿಪ್ರಾಯಪಟ್ಟಿದ್ದಾರೆ.