ETV Bharat / state

ನೀಟ್ ಪರೀಕ್ಷೆ: ದಾವಣಗೆರೆಯ ನಿಸರ್ಗಾಗೆ 55ನೇ ರ‍್ಯಾಂಕ್

ನೀಟ್ ಪರೀಕ್ಷೆಯಲ್ಲಿ ದಾವಣಗೆರೆಯ ಸರ್‌ ಎಂ.ವಿ. ಪಿಯು ಕಾಲೇಜಿನ ವಿದ್ಯಾರ್ಥಿನಿ ನಿಸರ್ಗಾ 55ನೇ ರ‍್ಯಾಂಕ್‌ ಪಡೆದು ರಾಜ್ಯದ ಗಮನ ಸೆಳೆದಿದ್ದಾರೆ.

55th-rank-for-nisarga
ನಿಸರ್ಗಾಗೆ 55 ನೇ ರ‍್ಯಾಂಕ್
author img

By

Published : Oct 17, 2020, 2:00 PM IST

ದಾವಣಗೆರೆ: ಸರ್‌ ಎಂ.ವಿ. ಪಿಯು ಕಾಲೇಜಿನ ವಿದ್ಯಾರ್ಥಿನಿ ಹೆಚ್​​​​‌.ಎಸ್‌.ನಿಸರ್ಗಾ ನೀಟ್‌ ಪರೀಕ್ಷೆಯಲ್ಲಿ 55ನೇ ರ‍್ಯಾಂಕ್‌ ಪಡೆದಿದ್ದಾರೆ.

ವಿದ್ಯಾನಗರದ ವಿನಾಯಕ ಬಡಾವಣೆಯ ನಿವಾಸಿ ಯುಬಿಡಿಟಿ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಧ್ಯಾಪಕ ಹೆಚ್‌.ಆರ್.ಸುದರ್ಶನ ರೆಡ್ಡಿ ಹಾಗೂ ಹೆಚ್ಚುವರಿ ಮುಖ್ಯ ವಿದ್ಯುತ್‌ ಪರಿವೀಕ್ಷಕರಾದ ಬಿ.ವಿ.ಶಶಿಕಲಾ ದಂಪತಿ ಪುತ್ರಿಯಾದ ನಿಸರ್ಗಾ, ನೀಟ‌್‌ ಪರೀಕ್ಷೆಯಲ್ಲಿ ಆಲ್‌ ಇಂಡಿಯಾ ರ‍್ಯಾಂಕಿಂಗ್‌ನಲ್ಲಿ 55ನೇ ರ್‍ಯಾಂಕ್‌ ಹಾಗೂ ಜನರಲ್‌ ಮೆರಿಟ್‌ನಲ್ಲಿ 42ನೇ ರ‍್ಯಾಂಕ್‌ ಪಡೆದು ರಾಜ್ಯದ ಗಮನ ಸೆಳೆದಿದ್ದಾರೆ.

ಕಠಿಣ ಪರಿಶ್ರಮ, ನಿರ್ದಿಷ್ಟ ಗುರಿ ಇದ್ದರೆ ಏನನ್ನಾದರೂ ಸಾಧನೆ ಮಾಡಬಹುದು. ಮೊದಲಿನಿಂದಲೂ ನೀಟ್‌ ಪರೀಕ್ಷೆ ಮೇಲೆಯೇ ಗಮನ ಕೇಂದ್ರೀಕರಿಸಿದ್ದೆ. ಎರಡು ವರ್ಷಗಳಿಂದ ಪರೀಕ್ಷೆಗಾಗಿ ನಿತ್ಯ 4 ಗಂಟೆ ಓದುತ್ತಿದ್ದೆ. ಕಾಲೇಜಿನಲ್ಲಿ ಮಾಡುತ್ತಿದ್ದ ಪರೀಕ್ಷೆಗಳು, ಕೊರೊನಾ ನಂತರ ಆರಂಭಿಸಿದ ಆನ್‌ಲೈನ್‌ ತರಗತಿಗಳು ನನ್ನ ಸಾಧನೆಗೆ ಸಹಕಾರಿಯಾದವು ಎಂದು ನಿಸರ್ಗಾ ಸಂತಸ ವ್ಯಕ್ತಪಡಿಸಿದ್ದಾರೆ.

ತಂದೆ, ತಾಯಿ, ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಸೇರಿ ಎಲ್ಲಾ ಸಿಬ್ಬಂದಿ ನನ್ನ ಓದಿಗೆ ಸಹಕಾರ ನೀಡುತ್ತಿದ್ದರು. ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.