ETV Bharat / state

ಫ್ಲಿಪ್​ಕಾರ್ಟ್​ನಲ್ಲಿ ಚಾಕು ಆರ್ಡರ್ ಮಾಡಿ ವ್ಯಕ್ತಿಯ ಕತ್ತು ಸೀಳಿದ್ರು... 24 ಗಂಟೆಯಲ್ಲೇ ಪೊಲೀಸರ ಅತಿಥಿಯಾದ್ರು! - ವ್ಯಕ್ತಿಯೊಬ್ಬನ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ

ಹಣಕ್ಕಾಗಿ‌ ಕೊಲೆ ಮಾಡಿ 1.30 ಲಕ್ಷ ರೂಪಾಯಿ ದೋಚಿದ್ದವರನ್ನು 24 ಗಂಟೆಯಲ್ಲಿಯೇ ಹೊನ್ನಾಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

honnalli police
ದಾವಣಗೆರೆ
author img

By

Published : Dec 23, 2020, 10:57 PM IST

ದಾವಣಗೆರೆ: ಹಣದ ಆಸೆಗಾಗಿ ಫ್ಲಿಪ್​ಕಾರ್ಟ್​ನಲ್ಲಿ ಚಾಕು ಆರ್ಡರ್ ಮಾಡಿ ವ್ಯಕ್ತಿಯೊಬ್ಬನ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದರು. ಕೊಲೆ ನಡೆದ 24 ಗಂಟೆಯಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಪೊಲೀಸರ ಅತಿಥಿಯಾದ ಆರೋಪಿಗಳು

ಹೊನ್ನಾಳಿ ಪಟ್ಟಣದ ಶೋಯಬ್ ಅಕ್ತರ್ (24), ಮುಮ್ತಾಕಿನ್ (22) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಕಳೆದ ಭಾನುವಾರ ನಜೀರ್ ಅಹ್ಮದ್ (48) ಎಂಬಾತನ ಕತ್ತು ಕತ್ತರಿಸಿ ಕೊಲೆ ಮಾಡಿದ್ದ ಆರೋಪಿಗಳನ್ನು ಹಿಡಿಯುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಹಣಕ್ಕಾಗಿ‌ ಕೊಲೆ ಮಾಡಿ 1.30 ಲಕ್ಷ ರೂಪಾಯಿ ದೋಚಿದ್ದವರನ್ನು 24 ಗಂಟೆಯಲ್ಲಿಯೇ ಹೊನ್ನಾಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇನ್ನು ಹೊನ್ನಾಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.