ETV Bharat / state

ಯಾರೋ ಸರ್ವಾಧಿಕಾರಿಗಳಿಗೋಸ್ಕರ ನಾನು ಜಗ್ಗಲ್ಲ- ಬಗ್ಗಲ್ಲ- ಕುಗ್ಗಲ್ಲ : ಎಂಪಿ ರೇಣುಕಾಚಾರ್ಯ - ಈಟಿವಿ ಭಾರತ ಕನ್ನಡ

ಯಾವುದೇ ಕಾರಣಕ್ಕೂ ನಾನು ಬಿಜೆಪಿ ತೊರೆಯಲ್ಲ, ಕಾಂಗ್ರೆಸ್​ ಸೇರಲ್ಲ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ಎಂಪಿ ರೇಣುಕಾಚಾರ್ಯ
ಎಂಪಿ ರೇಣುಕಾಚಾರ್ಯ
author img

By ETV Bharat Karnataka Team

Published : Nov 6, 2023, 10:31 PM IST

ಎಂಪಿ ರೇಣುಕಾಚಾರ್ಯ ಹೇಳಿಕೆ

ದಾವಣಗೆರೆ: ಯಾರೋ ಸರ್ವಾಧಿಕಾರಿಗಳಿಗೋಸ್ಕರ ನಾನು ಜಗ್ಗಲ್ಲ ಬಗ್ಗಲ್ಲ, ಕುಗ್ಗಲ್ಲ ಆ ಸರ್ವಾಧಿಕಾದಿಗಳಿಂದಲೇ ಪಕ್ಷ ಈ ಮಟ್ಟಕ್ಕೆ ಬಂದಿದೆ ಎಂದು ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಮತ್ತೆ ಸ್ವ ಪಕ್ಷದ ವಿರುದ್ಧವೇ ಗರಂ ಆದರು. ಹೊನ್ನಾಳಿ ತಾಲೂಕಿನ ಕಡಬದ ಕಟ್ಟೆ ಗ್ರಾಮದಲ್ಲಿ ಮಾತನಾಡಿದ ಅವರು, ಆ ಸರ್ವಾಧಿಕಾರಿ ಯಾರು ಎಂದು ಮತ್ತು ಅವರ ಹೆಸರನ್ನು ಮುಂದಿನ ದಿನಗಳಲ್ಲಿ ಹೇಳುವೆ ಎಂದರು.

ಅಧ್ಯಕ್ಷರು, ಮೋರ್ಚಾಗಳು, ಪದಾಧಿಕಾರಿಗಳ ಕೈ ಗೊಂಬೆಯಾಗಿದ್ದಾರೆ. ರಾಜ್ಯಸಭೆ, ವಿಧಾನ ಪರಿಷತ್ ಸದಸ್ಯರು ಅವರ ಕಡೆಯಾಗಿದ್ದಾರೆ ಅದನ್ನು ಪಟ್ಟಿ ಸಮೇತ ಬಿಡುಗಡೆ ಮಾಡುವೆ ಎಂದು ಹೇಳಿದರು. ಇನ್ನು ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಬೊಮ್ಮಾಯಿ ಅವರನ್ನು ಬಲಿ ಮಾಡಿದರು. ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರನ್ನು ಮುಗಿಸಿದರು. ಚುಮಾವಣೆ ಪೂರ್ವದಲ್ಲಿ ಬಿಜೆಪಿಗೆ 100 ಸ್ಥಾನ ಬರಕೂಡದು ಎಂದು ಪ್ಲಾನ್‌ ಮಾಡಿ, ಜೆಡಿಎಸ್ ಬಿಜೆಪಿ ಹೊಂದಾಣಿಕೆಯಲ್ಲಿ ಸಿಎಂ ಆಗಬೇಕು ಎಂದು ಕೆಲವರು ಹಗಲು ಕನಸು ಕಾಣ್ತಿದ್ದರು. ಹಾಗಾಗಿ ಈಶ್ವರಪ್ಪ, ಶೆಟ್ಟರ್ ಇದ್ದರೆ ಅವರೇ ಸಿಎಂ ಆಗಲಿದ್ದಾರೆ ಎಂದು ಅವರನ್ನು ಮುಗಿಸಿದರು ಎಂದರು.

ಬಿಜೆಪಿ ಬಿಡಲ್ಲ, ಕಾಂಗ್ರೆಸ್ ಸೇರಲ್ಲ: ಬಿಜೆಪಿ ಬರ ಅಧ್ಯಯನ ಪಟ್ಟಿಯಿಂದ ಹೊರಗಿಟ್ಟರೆ ನನಗೇನೂ ನಷ್ಟವಿಲ್ಲ, ಬಿಜೆಪಿಗೆ ನಷ್ಟ. ನಾನು ಕಾಂಗ್ರೆಸ್​ನ ಮುಖಂಡರನ್ನು ಭೇಟಿಯಾಗಿದ್ದು ನ್ಯಾಮತಿ ಹೊನ್ನಾಳಿ ತಾಲೂಕನ್ನು ಬರದ ಪಟ್ಟಿಗೆ ಸೇರಿಸಿ ಎಂದು ಹೇಳಲು ಮಾತ್ರ. ಸರ್ಕಾರ ಬಂದು ಆರು ತಿಂಗಳಾಗಿದೆ. ಆದರೆ ಇನ್ನು ಪರಿಹಾರ ಸಿಕ್ಕಿಲ್ಲ ಒಂದು ಎಕರೆಗೆ 25 ಸಾವಿರ ಕೊಡಲೇಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದೇನೆ. ನಾನು ಅನಿವಾರ್ಯವಾಗಿ ಮಾತನಾಡಿದ್ದು ನಿಜ, ಬೊಮ್ಮಾಯಿಯವರು ಆಡಳಿತ ಮಾಡಲು ನಮ್ಮ ಕೆಲ ನಾಯಕರು ಬಿಡಲಿಲ್ಲ, ಯಡಿಯೂರಪ್ಪ ಅವರಂತಹ ಲೀಡರ್​ರನ್ನು ಕೇವಲ ತುಮಕೂರು ದಾವಣಗೆರೆ ಜಿಲ್ಲೆಗೆ ಸೀಮಿತ ಮಾಡಿ ಪಟ್ಟಿಯಲ್ಲಿ ಹೆಸರು ಹಾಕಿದ್ದಾರೆ. ಅಂತಹ ಲೀಡರ್​ರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದ ಅವರು, ಯಾವುದೇ ಕಾರಣಕ್ಕೂ ನಾನು ಬಿಜೆಪಿ ತೊರೆಯಲ್ಲ, ಕಾಂಗ್ರೆಸ್​ ಸೇರಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯ ಮಾಜಿ ಶಾಸಕರು ನನಗೆ ಫೋನ್ ಮಾಡಿ ಪಕ್ಷ ಬಿಡುವ ಬಗ್ಗೆ ಮಾತನಾಡಿದರು. ಆದರೆ, ನಾನು ಪಕ್ಷ ತೊರೆಯಲ್ಲ ಎಂದು ರೇಣುಕಾಚಾರ್ಯ ಹೇಳಿದ್ದರು. ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅವರು, ಪಕ್ಷಕ್ಕೆ ಸಮರ್ಥ ನಾಯಕತ್ವ ಬೇಕು, ನಮಗೆ ಅಭದ್ರತೆ ಕಾಡ್ತಿದೆ ಎಂದು ಮಾಜಿ ಶಾಸಕರು, ಮುಖಂಡರು ದೂರವಾಣಿ ಕರೆ ಮಾಡಿ ಪಕ್ಷ ಬಿಡುವ ಕುರಿತು ಹೇಳಿದರು ಎಂದು ಕೆಲ ದಿನಗಳ ಹಿಂದೆ ರೇಣುಕಾಚಾರ್ಯ ಹೇಳಿದ್ದರು.

ಇದನ್ನೂ ಓದಿ: ಯಡಿಯೂರಪ್ಪ ಅವರು ಬಿ ಫಾರಂ ಕೊಡದೆ ಇದ್ದಿದ್ದರೆ ರಾಜ್ಯದ ಜನರಿಗೆ ನಾನು ಯಾರೆಂಬುದೇ ತಿಳಿಯುತ್ತಿರಲಿಲ್ಲ: ಎಂ ಪಿ ರೇಣುಕಾಚಾರ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.