ETV Bharat / state

ಚಂದ್ರು ಕೈಗೆ ಹಗ್ಗ ಕಟ್ಟಿದ್ದಾರೆ.. ಇದು ವ್ಯವಸ್ಥಿತ ಕೊಲೆ: ಶಾಸಕ ರೇಣುಕಾಚಾರ್ಯ ಆರೋಪ

ಶಾಸಕ ಎಂ ಪಿ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಸಾವಿನ ಬಗ್ಗೆ ತನಿಖೆಗಳು ನಡೆಯುತ್ತಿವೆ. ಈ ನಡುವೆ ರೇಣುಕಾಚಾರ್ಯ ಇದು ಕೊಲೆ ಎಂದು ಆರೋಪಿಸಿದ್ದಾರೆ.

Chandrasekhar and Renukacharya
ಚಂದ್ರಶೇಖರ್ ಹಾಗೂ ರೇಣುಕಾಚಾರ್ಯ
author img

By

Published : Nov 5, 2022, 10:53 AM IST

Updated : Nov 5, 2022, 2:32 PM IST

ದಾವಣಗೆರೆ: ಶಾಸಕ ಎಂ ಪಿ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಸಾವಿನ ಬಗ್ಗೆ ಸಾವಿರಾರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ನಡುವೆ ರೇಣುಕಾಚಾರ್ಯ ಇದು ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಪಘಾತದಲ್ಲಿ ಸಂಭವಿಸಿದ ಸಾವಲ್ಲ. ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಚಂದ್ರು ಕೈಗೆ ಹಗ್ಗ ಕಟ್ಟಲಾದ ವಿಡಿಯೋವನ್ನು ತಮ್ಮ ಮಾಧ್ಯಮ ಗ್ರೂಪ್​ನಲ್ಲಿ ಹಂಚಿಕೊಂಡಿದ್ದಾರೆ. ಇದು ತನಿಖೆಗೆ ಹೊಸ ಟ್ವಿಸ್ಟ್ ಕೊಟ್ಟಿದೆ. ಅಕ್ಟೋಬರ್ 30 ರಂದು ಚಂದ್ರು ಕಾಣೆಯಾಗಿದ್ದರು. ನವೆಂಬರ್ 3 ರಂದು ದಾವಣಗೆರೆಯ ತುಂಗಾನಾಲೆಯಲ್ಲಿ ಶವವಾಗಿ ಕಾರಿನ ಹಿಂಬದಿ ಸೀಟಿನಲ್ಲಿ ಪತ್ತೆಯಾಗಿದ್ದರು.

ತುಂಗಾನಾಲೆಯಲ್ಲಿ ಪತ್ತೆಯಾದ ಚಂದ್ರಶೇಖರ್ ಮೃತದೇಹ

ಚಂದ್ರು ಕೊಲೆಗೈಯಲಾಗಿದೆ ಎಂದು ದೂರು : ಚಂದ್ರು ಕಾಣೆಯಾದಾಗ ಕುಟುಂಬಸ್ಥರು ನಾಪತ್ತೆ ಎಂದು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಶವವಾಗಿ ಸಿಕ್ಕ ಬಳಿಕ ಇದೊಂದು ಕೊಲೆ ಎಂದು ಎಫ್​ಐಆರ್ ದಾಖಲಿಸಿದ್ದಾರೆ. ಕೈಕಾಲು ಕಟ್ಟಿ ಬಲವಾಗಿ ಕೊಲೆಗೈಯಲಾಗಿದೆ ಎಂದು ಚಂದ್ರು ತಂದೆ ರಮೇಶ್ ದೂರು ನೀಡಿದ್ದಾರೆ. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಸಾವಿನ ತನಿಖೆ ಎಲ್ಲ ಆಯಾಮದಲ್ಲೂ ನಡೆಯುತ್ತಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ

Last Updated : Nov 5, 2022, 2:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.