ದಾವಣಗೆರೆ: ಸಿಎಂ ಬದಲಾವಣೆ ಕೇವಲ ಊಹಾಪೋಹ ಎಂದು ಶಾಸಕ ಎಂಪಿ ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಪ್ರತಿಕ್ರಿಯಿಸಿದ ಅವರು, ಸಿಎಂ ಬದಲಾವಣೆ ವಿಚಾರದಲ್ಲಿ ಐದು ಜನ್ರ ಲಿಸ್ಟ್ ಕೇಂದ್ರಕ್ಕೆ ಹೋಗಿದ್ದು, ಅದರಲ್ಲಿ ಪ್ರಹ್ಲಾದ್ ಜೋಶಿಯವರ ಹೆಸರು ಕೂಡ ಇದೆ ಎಂಬ ಊಹಾಪೋಹಗಳು ಕೇಳಿ ನಾನೇ ಪ್ರಹ್ಲಾದ್ ಜೋಶಿಯವರ ಬಳಿ ಮಾತನಾಡಿದ್ದೇನೆ, ಅವರು ರೇಣುಕಾಚಾರ್ಯ ಅವರೇ ನನಗೆ ದೆಹಲಿಯಲ್ಲಿ ಒಳ್ಳೆಯ ಗೌರವವಿದೆ ಎಂದಿದ್ದಾರೆ.
ಅವರಿಗೆ ಕೇಂದ್ರದಲ್ಲಿ ಒಳ್ಳೆಯ ಖಾತೆ ಸಿಕ್ಕಿದೆ, ಆಡಳಿತ ಪಕ್ಷ - ಪ್ರತಿಪಕ್ಷದ ನಡುವೆ ಸೇತುವೆಯಾಗಿ ಕೆಲಸ ಮಾಡುತಿದ್ದಾರೆ, ನಾನು ರಾಜ್ಯ ರಾಜಕಾರಣಕ್ಕೆ ಬರೋದಿಲ್ಲ ಎಂದಿದ್ದಾರೆ, ಕೆಲವೊಂದಿಷ್ಟು ಜನ ದೆಹಲಿಯಲ್ಲಿ ಕೂತು ಆಟವಾಡುತಿದ್ದಾರೆ. ಅವರು ಕ್ಷೇತ್ರದಲ್ಲಿ ಗೆಲ್ಲೋಕೆ ಆಗದವರು ಈ ರೀತಿ ಎಲ್ಲ ಮಾಡುತ್ತಿದ್ದಾರೆ ಎಂದು ಸಿಪಿ ಯೋಗೇಶ್ವರ್ ವಿರುದ್ಧ ಎಂಪಿ ರೇಣುಕಾಚಾರ್ಯ ಕಿಡಿಕಾರಿದರು. ಕೋವಿಡ್ ಕೆಲಸ ಮರೆತು ಈ ರೀತಿ ಕೆಲಸ ಮಾಡುವವರಿಗೆ ಜನ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ.
ರಾಜ್ಯದ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಎಲ್ಲರೂ ಸಿಎಂ ಬದಲಾವಣೆ ಇಲ್ಲ ಅಂದಿದ್ದಾರೆ. ಇವೆಲ್ಲ ಕೇವಲ ಊಹಾಪೋಹ ಸಿಎಂ ಬದಲಾವಣೆ ಇಲ್ಲ, ಸಿಎಂ ಬದಲಾವಣೆ ನೂರಕ್ಕೆ ನೂರಷ್ಟು ಸುಳ್ಳು ಎಂದು ಉಹಾಪೋಹಕ್ಕೆ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದ್ದಾರೆ.