ದಾವಣಗೆರೆ: ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಅಣ್ಣನ ಮಗ ನಾಪತ್ತೆಯಾಗಿದ್ದಾರೆ. ಚಂದ್ರು ಅಲಿಯಾಸ್ ಚಂದ್ರಶೇಖರ್ ನಾಪತ್ತೆಯಾದವರು.
ಕಳೆದ ಭಾನುವಾರ ಶಿವಮೊಗ್ಗದ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಆಶಿರ್ವಾದ ಪಡೆದಿದ್ದ ಚಂದ್ರು, ಶಿವಮೊಗ್ಗದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಹೊನ್ನಾಳಿಗೆ ಹಿಂದಿರುಗದ್ದ. ಆದರೆ, ಇದ್ದಕ್ಕಿದಂತೆ ಭಾನುವಾರ ನಾಪತ್ತೆಯಾದವನು ಇನ್ನು ಪತ್ತೆಯಾಗಿಲ್ಲವಂತೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ನಿನ್ನೆ ಫೋನ್ ಸ್ವಿಚ್ಡ್ ಆಫ್ ಆಗಿದ್ದು, ಕುಟುಂಬಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.
ಯಾವಾಗಲೂ ಸ್ನೇಹಿತರೊಂದಿಗೆ ಹೋಗುತ್ತಿದ್ದ ಚಂದ್ರು ಈ ಬಾರಿ ಒಬ್ಬನೇ ಹೋಗಿರುವುದು ಆತಂಕಕ್ಕೆ ಕಾರಣವಾಗಿದೆ. ಚಿಂತೆಗೀಡಾದ ಚಂದ್ರು ಪೋಷಕರು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಹೊನ್ನಾಳಿ ಪೊಲೀಸರು ಹಾಗೂ ಚಂದ್ರು ಕುಟುಂಬಸ್ಥರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ರೇಣುಕಾಚಾರ್ಯ ಬೆನ್ನೆಲುಬಾಗಿದ್ದ ಚಂದ್ರು: ಕಳೆದ ಎರಡು ದಿನಗಳಿಂದ ಕಾಣೆಯಾದ ಚಂದ್ರಶೇಖರ್, ರೇಣುಕಾಚಾರ್ಯ ಜೊತೆ ಸಕ್ರಿಯವಾಗಿ ಹೊನ್ನಾಳಿ ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದರು.
ಇದನ್ನೂ ಓದಿ: ದಾವಣಗೆರೆ: ಶಾಸಕ ರೇಣುಕಾಚಾರ್ಯ ವಿರುದ್ದ ಜೀವ ಬೆದರಿಕೆ ದೂರು ಸಲ್ಲಿಕೆ