ದಾವಣಗೆರೆ: ಬಿಪಿನ್ ರಾವತ್ ಅವರದ್ದು ದುರದೃಷ್ಟಕರ ಸಾವು. ಇದರಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ತಿಳಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ಬಿಪಿನ್ ರಾವತ್ ಅವರ ಹೆಲಿಕಾಪ್ಟರ್ ಮೋಡದೊಳಗೆ ಹೋಗಿದ್ದು, ತಾಂತ್ರಿಕ ದೋಷದಿಂದ ಹೀಗೆ ಆಗಿರಬಹುದು. ಈ ಘಟನೆ ಬಗ್ಗೆ ಸಹಜವಾಗಿ ಇಡೀ ದೇಶದಲ್ಲಿ ಅನುಮಾನ ಮೂಡಿದೆ. ಬ್ಲ್ಯಾಕ್ ಬಾಕ್ಸ್ ಸಿಕ್ಕಿದೆ, ಉತ್ತರ ಸಿಗುತ್ತದೆ. ಪ್ರಧಾನಿ, ರಕ್ಷಣಾ ಸಚಿವರು ದಕ್ಷ ಆಡಳಿತಗಾರರಾಗಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುತ್ತಾರೆ. ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರುತ್ತದೆ ಎಂದರು.
ನನಗೆ ವೈಯುಕ್ತಿಕ ಕೆಲಸ, ಆರೋಗ್ಯದ ಸಮಸ್ಯೆಯಿಂದ ಅಂತ್ಯಕ್ರಿಯೆಗೆ ಹೋಗಲಾಗಲಿಲ್ಲ. ಸಂಸತ್ಗೆ ಸಂಸದರ ಗೈರು ವಿಚಾರ, ಪ್ರಧಾನಿಯವರು ಎಲ್ಲರಿಗೂ ಮನವಿ ಮಾಡಿದ್ದು ಆದ್ದರಿಂದ 13ರಿಂದ 15 ದಿನ ನಾನು ದೆಹಲಿಯಲ್ಲೇ ಇರುತ್ತೇನೆ ಎಂದು ತಿಳಿಸಿದರು.
ಪಾಲಿಕೆ ಸದಸ್ಯರೊಂದಿಗೆ ಬಂದು ಮತಚಲಾಯಿಸಿದ ಸಂಸದರು :
ಚಿತ್ರದುರ್ಗ - ದಾವಣಗೆರೆ ಪರಿಷತನ ಬಿಜೆಪಿ ಅಭ್ಯರ್ಥಿ ಕೆಎಸ್ ನವೀನ್ ಪರ ಪಾಲಿಕೆ ಸದಸ್ಯರೊಂದಿಗೆ ಆಗಮಿಸಿದ ಸಂಸದರು, ಪಾಲಿಕೆ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು. ಬಳಿಕ ನವೀನ್ ಪರ ಎಲ್ಲ ಮತದಾರರ ಸಹಮತವಿದ್ದು, ಖಂಡಿತವಾಗಿ ಅವರ ಗೆಲವು ನಿಶ್ಚಿತ ಎಂದು ಭವಿಷ್ಯ ನುಡಿದರು.