ದಾವಣಗೆರೆ: ಬಿಜೆಪಿ ಅಣ್ಣ ತಮ್ಮರಂತೆ ಇರುವ ಕುಟುಂಬ, ಒಂದು ಮಾತು ಬರುತ್ತೇ, ಒಂದು ಮಾತು ಹೋಗುತ್ತೆ ಸುಧಾರಿಸಿಕೊಳ್ಳಬೇಕು ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯಿಸಿದರು.
ನಗರದಲ್ಲಿ ಮಾತನಾಡಿದ ಅವರು, ಇದರ ಬಗ್ಗೆ ಮಾತನಾಡ್ಬೇಡಿ ಎಂದು ಹೇಳಿದ್ದಾರೆ. ಆದ್ರೂ ಕೂಡ ಎರಡು ವರ್ಷ ಬಿಎಸ್ವೈ ಅವರೇ ಸಿಎಂ ಆಗಿರ್ತಾರೆ. ಬಿಜೆಪಿ ಒಂದು ಕುಟುಂಬ ಇದ್ದಂತೆ, ಭಿನ್ನಮತ ಇಲ್ಲ, ಕುಟುಂಬದಲ್ಲಿ ಸಣ್ಣಪುಟ್ಟ ಮನಸ್ತಾಪ ಇದ್ದಿದ್ದೆ, ಎಲ್ಲವನ್ನು ಸರಿ ಮಾಡಿಕೊಳ್ಳುತ್ತೇವೆ ಎಂದರು.
ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಚಿವ ಸ್ಥಾನ ನೀಡದ ಹಿನ್ನೆಲೆ ವಿಶ್ವನಾಥ್ ಆರೋಪ ಮಾಡ್ತಿದ್ದಾರೆ. ವಿಶ್ವನಾಥ್ ದಾಖಲೆ ನೀಡಿ ಆರೋಪ ಮಾಡಲಿ, ಎಂಎಲ್ಸಿ ನಾಮನಿರ್ದೇಶನ ಆದವರಿಗೆ ಸಚಿವ ಸ್ಥಾನ ಕೊಡಲು ಬರಲ್ಲ, ವಿಶ್ವನಾಥ್ ಕೂಡ ನಮ್ಮ ನಾಯಕರೇ, ಮುಂದೆ ನೋಡೋಣ ಎಂದರು.
ಓದಿ: ಸಿಎಂ ಹಾಗೂ ಅವರ ಮಗ ದುಡ್ಡು ಹೊಡೆಯುವುದನ್ನ ಬಿಟ್ಟು ಬೇರೇನೂ ಮಾಡುತ್ತಿಲ್ಲ : ಸಿದ್ದರಾಮಯ್ಯ