ETV Bharat / state

ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಿರುವ ಗರ್ಭಿಣಿಯರು; ಹೇಗಿದೆ ವೈದ್ಯಕೀಯ ಸೇವೆ?

ಇನ್ನೊಂದು ಜೀವಕ್ಕೆ ಜೀವ ಕೊಡುವ ಹೆರಿಗೆ ಒಂದು ನೈಸರ್ಗಿಕ ಪ್ರಕ್ರಿಯೆ. ಈ ಸಂದರ್ಭದಲ್ಲಿ ಗರ್ಭಿಣಿಯರಿಗೆ ಸೂಕ್ತ ವೈದ್ಯಕೀಯ ಸೇವೆ ಲಭ್ಯವಾಗಬೇಕು. ಇತ್ತೀಚಿನ ದಿನಗಳಲ್ಲಿ ಗರ್ಭಿಣಿಯರು ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ಕುರಿತ ವರದಿ ಇಲ್ಲಿದೆ.

author img

By

Published : Apr 30, 2021, 8:02 PM IST

most of the pregnant lady's are coming to government hospital to take treatment
ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಿರುವ ಗರ್ಭಿಣಿಯರು; ಹೇಗಿದೆ ವೈದ್ಯಕೀಯ ಸೇವೆ?

ಬೆಂಗಳೂರು/ದಾವಣಗೆರೆ/ತುಮಕೂರು: ತಾಯ್ತನ ಎನ್ನೋದೇ ಒಂದು ಅದ್ಭುತ ಅನುಭವ. ಹೆಣ್ಣು ತನ್ನ ಜೀವನದಲ್ಲೇ ಸಾರ್ಥಕತೆ ಭಾವನೆ ಹೊಂದುವ ಸಮಯವದು. ಹಾಗಾಗಿ ಈ ಸಂದರ್ಭದಲ್ಲಿ ಗರ್ಭಿಣಿಯರು, ಬಾಣಂತಿಯರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ದೊರೆಯಲೇಬೇಕು. ಇತ್ತೀಚಿನ ದಿನಗಳಲ್ಲಿ ಗರ್ಭಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ಕೆಲ ಜಿಲ್ಲೆಗಳು ಸಾಕ್ಷಿಯಾಗಿವೆ.

ಬೆಂಗಳೂರಿನಲ್ಲಿ ಕೋವಿಡ್​ ಪ್ರಕರಣಗಳು ಹೆಚ್ಚುತ್ತಿರುವ ಪರಿಣಾಮ ಗರ್ಭಿಣಿಯರಿಗೆ ಚಿಕಿತ್ಸೆ ನೀಡೋದು ಕೂಡಾ ಸವಾಲಾಗಿದೆ. ಯಾಕೆಂದರೆ, ಹೆಚ್ಚಿನ ಆಸ್ಪತ್ರೆಗಳೀಗ ಕೋವಿಡ್​ ಆಸ್ಪತ್ರೆಗಳಾಗಿ ಬದಲಾಗಿವೆ. ಹಾಗಾಗಿ ಸದ್ಯ ನಗರದ ವಾಣಿವಿಲಾಸ್​ ಆಸ್ಪತ್ರೆಯಲ್ಲೇ ಗರ್ಭಿಣಿಯರನ್ನು ದಾಖಲಿಸಲಾಗುತ್ತಿದೆ. ಒಂದು ವೇಳೆ ಸೋಂಕು ತಗುಲಿದ್ದರೆ ವಿಕ್ಟೋರಿಯಾ ಅಥವಾ ಗೋಷಲ್​ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಹೆರಿಗೆ ಆದ ಬಳಿಕ ಪಾಸಿಟಿವ್ ಎಂದು ವರದಿ ಬಂದ್ರೆ ಅಂಥವರಿಗಾಗಿಯೇ ಐಸೋಲೇಷನ್ ವಾರ್ಡ್​​ಗಳಿವೆ.

ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಿರುವ ಗರ್ಭಿಣಿಯರು

ದಾವಣಗೆರೆಯಲ್ಲಿ ಗರ್ಭಿಣಿಯರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳನ್ನೇ ನೆಚ್ಚಿಕೊಂಡಿದ್ದಾರೆ. ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ತಿಂಗಳಿಗೆ 800 ರಿಂದ 900 ಹೆರಿಗೆಗಳಾಗುತ್ತಿದ್ದು, ನಮಗೆ ಬೇಕಾದ ಪೂರಕ ವಾತಾವರಣವಿದೆ ಅಂತಾರೆ ಗರ್ಭಿಣಿ, ಬಾಣಂತಿಯರು.

ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸರಾಸರಿ 650 ಗರ್ಭಿಣಿಯರ ಹೆರಿಗೆ ಮಾಡಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಗರ್ಭಿಣಿಯರ ಪ್ರಮಾಣ ಕಳೆದ ಎರಡ್ಮೂರು ತಿಂಗಳಿನಿಂದ ಶೇಕಡಾ 20ರಷ್ಟು ಜಾಸ್ತಿಯಾಗಿದೆಯಂತೆ.

ಇದನ್ನೂ ಓದಿ: ರೈಲ್ವೆ ನಿಲ್ದಾಣ, ಏರ್​ಪೋರ್ಟ್​ಗಳಲ್ಲಿ ಪಾಲನೆ ಆಗುತ್ತಿದೆಯೇ ಕೋವಿಡ್​ ನಿಯಮಗಳು?

ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಗರ್ಭಿಣಿಯರ ಪ್ರಮಾಣ ಹೆಚ್ಚಾಗಿದೆ. ಆಸ್ಪತ್ರೆಗಳು ಕೂಡ ಈ ಕೋವಿಡ್​ ಒತ್ತಡದಲ್ಲೂ ಪೂರಕ ಚಿಕಿತ್ಸೆ ಒದಗಿಸುತ್ತಿರೋದು ಶ್ಲಾಘನಾರ್ಹ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.