ದಾವಣಗೆರೆ: ಶಾಸಕರು ಮಂತ್ರಿ ಆಗಬೇಕು ಎಂದು ರಾಜೀನಾಮೆ ಮೂಲಕ ಹೆದುರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಯಾರು ಎಲ್ಲಿಗೂ ಹೋಗಲ್ಲ, ಎಲ್ಲಾ ವಾಪಾಸ್ ಬರ್ತಾರೆ ಎಂದು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ, ರಾಜೀನಾಮೆ ಕೊಟ್ಟಿರುವವರು ಪುನಃ ವಾಪಸ್ ಪಡೆಯುತ್ತಾರೆ. ಸಚಿವ ಸ್ಥಾನ ನೀಡಿಲ್ಲ ಎಂದು ರಾಜೀನಾಮೆ ಕೊಟ್ಟು ಹೆದರಿಸಿದ್ದಾರೆ ಎಂದರು.
ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಬಿ.ಎಸ್. ಯಡಿಯೂರಪ್ಪಗೆ ಅವಸರವಾಗಿ ಸಿಎಂ ಆಗಬೇಕು ಎಂಬ ಆಸೆ ಇದೆ ಎಂದು ಬಿಎಸ್ವೈ ವಿರುದ್ಧ ಹರಿಹಾಯ್ದರು.