ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ತಮ್ಮ ಸ್ವಂತ ಹಣದಲ್ಲಿ 10 ಸಾವಿರ ಡೋಸ್ ಲಸಿಕೆ ತರಿಸಿ ಕ್ಷೇತ್ರದ ಜನತೆಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. 6 ಕೋಟಿ ರೂಪಾಯಿ ವೆಚ್ಚದಲ್ಲಿ ಪುಣೆಯಿಂದ ಒಟ್ಟು 2 ಲಕ್ಷ ಡೋಸ್ ತರಿಸಲು ನಿರ್ಧರಿಸಿದ್ದರು. ಈ ಭಾಗವಾಗಿ ಮೊದಲ ಹಂತದ 10 ಸಾವಿರ ಡೋಸ್ ದಾವಣಗೆರೆಗೆ ಬಂದಿದೆ.
ಈ ಖಾಸಗಿ ಉಚಿತ ಕೊರೊನಾ ಲಸಿಕ ವಿತರಣೆ ಕಾರ್ಯಕ್ರಮವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ 2ನೇ ಡೋಸ್ ಹಾಕಿಸಿಕೊಳ್ಳಲು ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಈಶ್ವರ್ ಖಂಡ್ರೆ, ಪಿಟಿ ಪರಮೇಶ್ವರ ನಾಯ್ಕ್, ಎಸ್ ಎಸ್ ಮಲ್ಲಿಕಾರ್ಜುನ್ , ಶಾಸಕ ಶಾಮನೂರು ಶಿವಶಂಕರಪ್ಪ ಭಾಗಿಯಾಗಿದ್ದರು.
ಕೊರೊನಾ ನಿಯಮ ಉಲ್ಲಂಘನೆ
ನಗರದ ದುಗ್ಗಮ್ಮನ ದೇವಸ್ಥಾನದ ಆವರಣದಲ್ಲಿ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಜನಜಂಗುಳಿ ಏರ್ಪಟ್ಟಿತ್ತು. ಕಾಂಗ್ರೆಸ್ ನಾಯಕರೂ ಸೇರಿದಂತೆ ಅಲ್ಲಿ ಸೇರಿದ್ದ ಜನತೆ ಅಂತರ ಕಾಪಾಡಿಕೊಳ್ಳದೇ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಕಂಡು ಬಂತು.