ದಾವಣಗೆರೆ: ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ವಸತಿಸಹಿತ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದು, ರಾತ್ರೋರಾತ್ರಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ರೇಣುಕಾಚಾರ್ಯ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.
ಹೊನ್ನಾಳಿ ತಾಲ್ಲೂಕಿನ ಸಿಂಗಟಗೆರೆ ಗ್ರಾಮದ ಕಿತ್ತೂರು ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯರು ವಾರ್ಡನ್ ವಿರುದ್ಧ ಪ್ರತಿಭಟನೆಗೆ ಕುಳಿತು ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ರೇಣುಕಾಚಾರ್ಯ ವಾರ್ಡನ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ವಸತಿ ಶಾಲೆಯಲ್ಲಿ ಊಟ ಸರಿಯಿಲ್ಲ, ನೀರಿಲ್ಲ, ಕಿಟ್ ಇಲ್ಲ ಎಂಬ ಹತ್ತಾರು ಸಮಸ್ಯೆಗಳನ್ನು ಹೇಳಿಕೊಂಡ ವಿದ್ಯಾರ್ಥಿನಿಯರು, ವಾರ್ಡನ್ ಸ್ಥಾನದಲ್ಲಿರುವ ಸುಭದ್ರರನ್ನು ಬದಲಾಯಿಸುವಂತೆ ರೇಣುಕಾಚಾರ್ಯ ಬಳಿ ಬೇಡಿಕೆಯಿಟ್ಟರು.
ವಿದ್ಯಾರ್ಥಿಗಳ ಬಳಿ ಸಮಸ್ಯೆ ಆಲಿಸಿ ಶಾಸಕ ರೇಣುಕಾಚಾರ್ಯ ವಾರ್ಡನ್ ಸುಭದ್ರಮ್ಮಳನ್ನು ಬೇರೆಡೆಗೆ ವರ್ಗಾಯಿಸುವ ಭರವಸೆ ನೀಡಿದರು. ವಾರ್ಡನ್ ಅನ್ನು ವರ್ಗಾವಣೆ ಮಾಡುವುದಾಗಿ ಮಾತು ಕೊಟ್ಟ ನಂತರ ವಿದ್ಯಾರ್ಥಿನಿಯರು ಪ್ರತಿಭಟನೆ ಹಿಂಪಡೆದರು.
ಇದನ್ನೂ ಓದಿ: Watch: 'ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಿಸಿ ತಾತ, ಇದಕ್ಕಾಗಿ ಪಾಕೆಟ್ ಮನಿಯನ್ನೂ ಕೊಡುವೆ'