ETV Bharat / state

ದೇಶದ್ರೋಹಿ‌ ಹೇಳಿಕೆ ಕೊಟ್ಟರೆ ನರ ಕತ್ತರಿಸಬೇಕಾಗುತ್ತೆ ಹುಷಾರ್: ರೇಣುಕಾಚಾರ್ಯ ಎಚ್ಚರಿಕೆ

ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ನಿಜವಾದ ಸ್ವಾತಂತ್ರ್ಯ ಹೋರಾಟಗಾರ ಆಗಿದ್ದರೆ ಎಲ್ಲ ಪಕ್ಷಗಳಿಗೆ ಮಾರ್ಗದರ್ಶನ ಮಾಡಲಿ. ಅದು ಬಿಟ್ಟು ಮಾಜಿ ಪ್ರಧಾನಿ ದೇವೇಗೌಡರ ಆದೇಶದಂತೆ ನಡೆಯುವುದು ಸೂಕ್ತವಲ್ಲ ಎಂದು ಹೊನ್ನಾಳಿಯಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು.

MLA Renukacharya
ರೇಣುಕಾಚಾರ್ಯ
author img

By

Published : Mar 1, 2020, 5:13 PM IST

ದಾವಣಗೆರೆ: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರು ನಿಜವಾದ ಸ್ವಾತಂತ್ರ್ಯ ಹೋರಾಟಗಾರ ಆಗಿದ್ದರೆ ಎಲ್ಲ ಪಕ್ಷಗಳಿಗೆ ಮಾರ್ಗದರ್ಶನ ಮಾಡಲಿ. ಅದು ಬಿಟ್ಟು ಮಾಜಿ ಪ್ರಧಾನಿ ದೇವೇಗೌಡರ ಆದೇಶದಂತೆ ನಡೆಯುವುದು ಸೂಕ್ತವಲ್ಲ ಎಂದು ಹೊನ್ನಾಳಿಯಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು.

ಪಾಕಿಸ್ತಾನ ಜಿಂದಾಬಾದ್ ಎಂದವರನ್ನ ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು:ರೇಣುಕಾಚಾರ್ಯ

ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು, ದೊರೆಸ್ವಾಮಿ ವಿಚಾರ ಇಟ್ಟುಕೊಂಡು ಅಧಿವೇಶನಕ್ಕೆ ಅಡ್ಡಿ ಪಡಿಸುವುದು ಸೂಕ್ತವಲ್ಲ. ಅಲ್ಲಿ ಬೇಕಾದ್ರೆ ಸೂಕ್ತ ಉತ್ತರ ನೀಡುತ್ತೇವೆ. ಅಧಿವೇಶನಕ್ಕೆ ಯಾರೇ ಬರಲಿ ಬಿಡಲಿ ಅಧಿವೇಶನ ನಡೆಸುತ್ತೇವೆ. ಪಾಕಿಸ್ತಾನ ಜಿಂದಾಬಾದ್ ಎಂದವರನ್ನ ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು, ನೇಣಿಗೇರಿಸಬೇಕು, ದೇಶದ್ರೋಹಿ‌ ಹೇಳಿಕೆ ಕೊಟ್ಟರೆ ನರ ಕತ್ತರಿಸಬೇಕಾಗುತ್ತೆ ಹುಷಾರ್​ ಎಂದರು. ದೊರೆಸ್ವಾಮಿ ಬಗ್ಗೆ ಮಾತಾಡುವರು ಪ್ರಧಾನಿ ಹಾಗೂ ಸಾವರ್ಕರ್ ಬಗ್ಗೆ ಕೀಳು ಮಟ್ಟದ ಭಾಷೆ ಬಳಸಿದ್ದರ ಬಗ್ಗೆ ಸದನದಲ್ಲಿ ಉತ್ತರಿಸಲಿ ಎಂದರು.

ಬಿಜೆಪಿಗೆ ಹಲವು ಶಾಸಕರ ಆಗಮನ

ಕೆಲ ದಿನಗಳಲ್ಲಿ ಬೇರೆ ಪಕ್ಷದ ಶಾಸಕರು ಬಿಜೆಪಿಗೆ ಬರುತ್ತಾರೆ. ಇದು ಆಪರೇಷನ್ ಕಮಲ ಅಲ್ಲ. ತಾವಾಗಿಯೇ ಬಿಜೆಪಿ ಸೇರ್ಪಡೆ ಆಗಲಿದ್ದಾರೆ. ಆಯಾ ಪಕ್ಷದಲ್ಲಿನ ಗೊಂದಲಕ್ಕೆ ಬೇಸತ್ತು ನಮ್ಮ ಪಕ್ಷದ ಸಿದ್ಧಾಂತ ಒಪ್ಪಿ ಪಕ್ಷಕ್ಕೆ ಸೇರಲಿದ್ದಾರೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.