ದಾವಣಗೆರೆ: ಸದಾ ಒಂದಿಲ್ಲೊಂದು ರೀತಯಲ್ಲಿ ಸುದ್ದಿಯಲ್ಲಿರುವ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಈಗ ವಿಶಿಷ್ಟ ವಿಚಾರವೊಂದಕ್ಕೆ ಸುದ್ದಿಯಾಗಿ, ಎಲ್ಲರ ಗಮನ ಸೆಳೆದಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ಆಗಿರುವ ರೇಣುಕಾಚಾರ್ಯ ಕೆಎಸ್ಆರ್ಟಿಸಿ ಬಸ್ ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಹೊನ್ನಾಳಿ ಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಹೊಸದಾಗಿ ನೀಡಿರುವ ಆರು ಕೆಎಸ್ಆರ್ಟಿಸಿ ಬಸ್ಗಳ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನ್ಮಾಮತಿ ಪಟ್ಟಣದಲ್ಲಿ ಕೆಎಸ್ಆರ್ಟಿಸಿ ಬಸ್ ಹತ್ತಿದ ರೇಣುಕಾಚಾರ್ಯ ಬೆಂಗಳೂರು-ಶಿವಮೊಗ್ಗ ಬಸ್ ಅನ್ನು ತಾವೇ ಚಲಾಯಿಸುವ ಮೂಲಕ ವಿನೂತನವಾಗಿ ಬಸ್ಗೆ ಚಾಲನೆ ನೀಡಿದರು. ಈ ವೇಳೆ ರೇಣುಕಾಚಾರ್ಯರ ಪರ ಅಭಿಮಾನಿಗಳು ಘೋಷಣೆ ಕೂಗಿದರು.